ಉತ್ತರ ಪ್ರದೇಶ ಮಹಾಕುಂಭ ಮೇಳದಲ್ಲಿ ಹಳ್ಳಿಕಾರ್ ಹಸು ತಳಿ ಪ್ರಚಾರ ಮಾಡಿದ ಕರ್ನಾಟಕದ ಯುವ ರೈತರು
ಉತ್ತರಭಾರತದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ದೇಶ ವಿದೇಶದಿಂದ ಕೋಟ್ಯಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಮೇಳವನ್ನು ಸದುಪಯೋಗಪಡಿಸಿಕೊಳ್ಳಲು ಕರ್ನಾಟಕದ ಯುವಕರು ಪ್ರಯತ್ನಿಸುತ್ತಿದ್ದಾರೆ. ನಶಿಸುತ್ತಿರುವ ಹಳ್ಳಿಕಾರ್ ಹಸುವಿನ ತಳಿಯನ್ನು ಸಂರಕ್ಷಿಸುವ ಉದ್ದೇಶದಿಂದ ಕರ್ನಾಟಕದ ಕೆಲವರು ಕುಂಭಮೇಳಕ್ಕೆ ಹೋಗಿದ್ದಾರೆ. ಅಲ್ಲಿ ಬ್ಯಾನರ್ ಹಿಡಿದು ಹಳ್ಳಿಕಾರ್ ತಳಿಯ ಬಗ್ಗೆ ಆಸಕ್ತಿ ಇರುವವರಿಗೆ ತಿಳಿಸಿಕೊಡುತ್ತಿದ್ದಾರೆ. ಗೋಹತ್ಯೆ ನಿಲ್ಲಬೇಕು, ಹಳ್ಳಿಕಾರ ತಳಿ ಉಳಿಸಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ಜನತೆಯ ಪರವಾಗಿ ನಾವು ಇಲ್ಲಿಗೆ ಬಂದಿರುವುದಾಗಿ ಯುವರೈತ ರಂಗೇಗೌಡ ಹೇಳಿದ್ದಾರೆ.