Mango season: ಅವಧಿಗೂ ಮೊದಲೇ ಕಾಯಿ ಕಟ್ಟಿದ ಮಾವು, ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ಕೋಲಾರ ರೈತರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Mango Season: ಅವಧಿಗೂ ಮೊದಲೇ ಕಾಯಿ ಕಟ್ಟಿದ ಮಾವು, ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ಕೋಲಾರ ರೈತರು

Mango season: ಅವಧಿಗೂ ಮೊದಲೇ ಕಾಯಿ ಕಟ್ಟಿದ ಮಾವು, ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ಕೋಲಾರ ರೈತರು

Published Feb 20, 2025 01:30 PM IST Praveen Chandra B
twitter
Published Feb 20, 2025 01:30 PM IST

  • ಕಳೆದ ಕೆಲವು ವರ್ಷಗಳಲ್ಲಿ ಬದಲಾದ ವಾತಾವರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಾವು ಬೆಳೆಗಾರರು ಈ ಬಾರಿ ಖುಷಿಯಲ್ಲಿದ್ದಾರೆ. ಅದರಲ್ಲೂ ಅತೀ ಹೆಚ್ಚು ಮಾವು ಬೆಳೆಯುವ ಕೋಲಾರದ ಶ್ರೀನಿವಾಸಪುರದ ರೈತರು ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ಮಾವಿನ ಮರಗಳು ಬೇಗನೆ ಹೂವು ಬಿಡಲಾರಂಭಿಸಿದ್ರೆ, ಕೆಲವು ಮಾವಿನ ಮರಗಳು ಈಗಾಗಲೇ ಕಾಯಿ ಕಟ್ಟಲಾರಂಭಿಸಿವೆ. ಈ ಹಿನ್ನೆಲೆ ಮಾವು ಬೆಳೆಗಾರರು ಕೂಡಾ ಈ ಬಾರಿ ಮಾವು ಬೆಳೆಯ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆರಂಭದಲ್ಲೇ ಭರ್ಜರಿ ಹೂವು ಬಿಟ್ಟಿರುವ ಹಿನ್ನೆಲೆ ಒಳ್ಳೆಯ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ವಾತಾವರಣದಲ್ಲಿನ ಮಿತಿ ಮೀರಿದ ತಾಪಮಾನ ಹಾಗೂ ಮಾವು ಬೆಳೆಗೆ ಆವರಿಸಿದ ರೋಗ ಬಾಧೆಯಿಂದಾಗಿ ಕಳೆದ ಬಾರಿ ಮಾವು ಬೆಳೆ ಸಂಪೂರ್ಣವಾಗಿ ಹಾಳಾಗಿತ್ತು. ಸರಿಯಾದ ಬೆಲೆಯೂ ಸಿಗದೆ ವರ್ಷಕ್ಕೊಂದು ಬಾರಿ ಬರುವ ಬೆಳೆ ನಿರಾಸೆ ಮೂಡಿಸಿತ್ತು. ಆದರೆ ಈಬಾರಿ ಮಾವಿನ ಮರಗಳಲ್ಲಿ ಅರಳಿರುವ ಹೂವು ರೈತರ ನಿರೀಕ್ಷೆಯನ್ನು ಅರಳಿಸಿವೆ.

More