ತಮಿಳುನಾಡು ಚುನಾವಣಾ ಅಖಾಡಕ್ಕೆ ದಳಪತಿ ವಿಜಯ್; ತಮಿಳಗ ವೆಟ್ರಿ ಕಳಗಂ ಪಕ್ಷದ ಚಿಹ್ನೆ ಬಿಡುಗಡೆ VIDEO
- ದಕ್ಷಿಣ ಭಾರತದ ಸೂಪರ್ ಸ್ಟಾರ್ ದಳಪತಿ ವಿಜಯ್ ರಾಜಕೀಯದಲ್ಲಿ ತಮ್ಮ ಇನ್ನಿಂಗ್ಸ್ ಶುರುಮಾಡಿದ್ದಾರೆ. 2026ರಲ್ಲಿ ನಡೆಯಲಿರುವ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕಿಳಿಯುವ ಬಗ್ಗೆ ಘೋಷಿಸಿರುವ ವಿಜಯ್ ಈಗಾಗಲೇ ತಮ್ಮ ತಮಿಳಗ ವೆಟ್ರಿ ಕಳಗಂ ಪಾರ್ಟಿ ಹೆಸರನ್ನ ಘೋಷಿಸಿದ್ದಾರೆ. ಇದೀಗ ಪಕ್ಷದ ಚಿಹ್ನೆಯನ್ನ ಬಿಡುಗಡೆ ಮಾಡಿದ್ದು, ರಾಜಕೀಯಕ್ಕೆ ಹುಮ್ಮಸ್ಸಿನಿಂದ ಕಾಲಿಟ್ಟಿದ್ದಾರೆ.