ಕರಾವಳಿಯ ದೈವ ಜಾರಂದಾಯನ ಮೊರೆ ಹೋದ ತಮಿಳು ನಟ ವಿಶಾಲ್; ತುಳುನಾಡಿನ ನೇಮೋತ್ಸವದಲ್ಲಿ ಭಾಗಿ
- ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ಮಂಗಳೂರು ಹೊರವಲಯದ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು,ಅಲ್ಲಿ ಜಾರಂದಾಯ ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ನೋಡಿದ್ದಾರೆ. ಇತ್ತೀಚೆಗೆ ವಿಶಾಲ್ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು, ಇದಕ್ಕಾಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ್ದು ಅದಕ್ಕೆ ವಿಶಾಲ್ ಅವರು ಒಪ್ಪಿದ್ದಾರೆ.