KSRTC Bus Accident: ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಅಪ್ಪಚ್ಚಿಯಾದ ಕ್ಯಾಂಟರ್; ತರಕಾರಿ ಮಾರ್ಕೆಟಿನಂತಾದ ಅಪಘಾತ ಸ್ಥಳ!
ತಮಿಳುನಾಡಿನಲ್ಲಿ ಸಂಭವಿಸಿದ ಕೆಎಸ್ಆರ್‌ಟಿಸಿ ಬಸ್ ಮತ್ತು ಕ್ಯಾಂಟರ್ ನಡುವಿನ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕೋಲಾರದ ಶ್ರೀನಿವಾಸಪುರದಿಂದ ಚೆನ್ನೈಗೆ ತರಕಾರಿ ಸಾಗಿಸುತ್ತಿದ್ದ ಕ್ಯಾಂಟರ್, ಮೇಲ್‌ಮರುವತ್ತೂರು ಓಂ ಶಕ್ತಿ ಪ್ರವಾಸ ಮುಗಿಸಿ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ತೀವ್ರತೆಗೆ ಕ್ಯಾಂಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಅದರಲ್ಲಿದ್ದ ತರಕಾರಿ ರಸ್ತೆ ತುಂಬಾ ಚಲ್ಲಾಪಿಲ್ಲಿಯಾಗಿದೆ. ಈ ತರಕಾರಿಯನ್ನು ಆಯ್ದುಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ದರಿಂದ ಅಪಘಾತ ಸ್ಥಳ ತರಕಾರಿ ಮಾರ್ಕೆಟ್‌ನಂತೆ ಬದಲಾಯಿತು.