KSRTC Bus Accident: ಕೆಎಸ್ಆರ್‌ಟಿಸಿ ಬಸ್ ಹಾಗೂ ತರಕಾರಿ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ; ಕೋಲಾರದ ನಾಲ್ವರ ದುರ್ಮರಣ- ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ksrtc Bus Accident: ಕೆಎಸ್ಆರ್‌ಟಿಸಿ ಬಸ್ ಹಾಗೂ ತರಕಾರಿ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ; ಕೋಲಾರದ ನಾಲ್ವರ ದುರ್ಮರಣ- ವಿಡಿಯೋ

KSRTC Bus Accident: ಕೆಎಸ್ಆರ್‌ಟಿಸಿ ಬಸ್ ಹಾಗೂ ತರಕಾರಿ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ; ಕೋಲಾರದ ನಾಲ್ವರ ದುರ್ಮರಣ- ವಿಡಿಯೋ

Jan 10, 2025 03:54 PM IST Umesh Kumar S
twitter
Jan 10, 2025 03:54 PM IST

KSRTC Bus Accident: ತಮಿಳುನಾಡಿನ ರಾಣಿಪೇಟೆ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಕರ್ನಾಟಕದ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ನಲ್ಲೂರು ಗ್ರಾಮದಿಂದ ಹೊರಟ್ಟಿದ್ದ ಬಸ್ ತಮಿಳುನಾಡಿನ ಮೇಲ್‌ಮರವತ್ತೂರು ಓಂಶಕ್ತಿ ದೇವಾಲಯಕ್ಕೆ ಹೋಗಿ ವಾಪಸ್ ಆಗುತ್ತಿತ್ತು. ಇತ್ತ ಶ್ರೀನಿವಾಸಪುರ ತಾಲ್ಲೂಕು ಸೀಗೆಹಳ್ಳಿ ಗ್ರಾಮದಿಂದ ಚೆನೈಗೆ ತರಕಾರಿ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ಮತ್ತು ಬಸ್‌ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಕ್ಯಾಂಟರ್‌ನಲ್ಲಿದ್ದ ಕೋಲಾರ ಮೂಲದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಸರ್ಕಾರಿ ಬಸ್ ಚಾಲಕ ಮುಳಬಾಗಿಲು ತಾಲ್ಲೂಕಿನ ನೆರ್ನಹಳ್ಳಿ ಬಾಬು ಹಾಗೂ ಸರ್ಕಾರಿ ಬಸ್ ನಲ್ಲಿದ್ದ ಓರ್ವಮಹಿಳೆ ಸ್ಥಿತಿ ಗಂಭೀರವಾಗಿದೆ.

More