Mahesh Travels : ಕರಾವಳಿಯ ಖ್ಯಾತ ಮಹೇಶ್ ಟ್ರಾವೆಲ್ಸ್ ಮಾಲಿಕ ನೇಣಿಗೆ ಕೊರಳು ; ನೌಕರರ ಗೌರವ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Mahesh Travels : ಕರಾವಳಿಯ ಖ್ಯಾತ ಮಹೇಶ್ ಟ್ರಾವೆಲ್ಸ್ ಮಾಲಿಕ ನೇಣಿಗೆ ಕೊರಳು ; ನೌಕರರ ಗೌರವ

Mahesh Travels : ಕರಾವಳಿಯ ಖ್ಯಾತ ಮಹೇಶ್ ಟ್ರಾವೆಲ್ಸ್ ಮಾಲಿಕ ನೇಣಿಗೆ ಕೊರಳು ; ನೌಕರರ ಗೌರವ

Published Oct 03, 2023 06:21 PM IST Prashanth BR
twitter
Published Oct 03, 2023 06:21 PM IST

ಮಂಗಳೂರಿನ ಪ್ರಖ್ಯಾತ ಮಹೇಶ್ ಬಸ್ ಮಾಲಕ ಪ್ರಕಾಶ್ ಶೇಖ ಅವರ ಪಾರ್ಥೀವ ಶರೀರದ ಅಂತಿಮಯಾತ್ರೆ ನೂರಾರು ನೌಕರರ ನೇತೃತ್ವದಲ್ಲಿ ನಡೆದಿದೆ. . ರವಿವಾರ ಅವರು ಕದ್ರಿಯಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಸುಮಾರು 60ರಷ್ಟು ಬಸ್ ಗಳಿರುವ ಅವರು ಏಕಾಏಕಿ ನೇಣಿಗೆ ಶರಣಾಗಿದ್ದರು.ಪ್ರಕಾಶ್ ಶೇಖ ಅವರ ಮೃತದೇಹ ಮಹಜರು ಕಾರ್ಯ ನಗರದ ಎ.ಜೆ.ಆಸ್ಪತ್ರೆಯಲ್ಲಿ ನಡೆದಿತ್ತು. ಸೋಮವಾರ ಬೆಳಗ್ಗೆ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಗೊಂಡಿದೆ.  ಬಳಿಕ ಅವರದ್ದೇ ಮಹೇಶ್ ಬಸ್ ಗಳ ಮೆರವಣಿಗೆಯೊಂದಿಗೆ ಪಾರ್ಥಿವ ಶರೀರದ ಅಂತಿಮಯಾತ್ರೆಯು ಎ.ಜೆ.ಆಸ್ಪತ್ರೆಯಿಂದ ಶಕ್ತಿನಗರದ ರುದ್ರಭೂಮಿವರೆಗೆ ನಡೆದಿದೆ. ಬಳಿಕ ಶಕ್ತಿನಗರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿತು.

More