Mandya Protest : ಬಿಡೋ ನೀರು ಬಿಟ್ಟು ಈಗ ಡಿಸಿಎಂ ಅವಿವೇಕಿ ತರ ಮಾತಾಡ್ತಾರೆ.. ಮಂಡ್ಯದಲ್ಲಿ ಜನಾಕ್ರೋಶ..!
ಬಿಡೋ ನೀರನ್ನ ತಮಿಳುನಾಡಿಗೆ ಬಿಟ್ಟು ಈಗ ರಾಜಕೀಯ ನಾಯಕರು ಅವಿವೇಕಿಗಳ ತರ ಮಾತಾಡ್ತಿದ್ದಾರೆ. ಬೆಂಗಳೂರಿಗೆ ಹೋಗೋ ಕುಡಿಯುವ ನೀರನ್ನ ತಡೆದರು ಎಲ್ಲರಿಗೂ ಅರ್ಥ ಆಗುತ್ತೆ ಅಂತ ಮಂಡ್ಯದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ ಕೊರತೆ ಮುನ್ಸೂಚನೆ ಅರಿತು ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಬೇಕಿತ್ತು. ಆದರೆ ರಾಜಕೀಯ ಓಲೈಕೆಗೆ ಮುಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸಂದರ್ಭ ಸೃಷ್ಠಿಸಿದ್ದಾರೆ ಎಂದು ಹೋರಾಟದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.