ಕೆಆರ್‌ಎಸ್ ಜಲಾಶಯ ಭರ್ತಿ; ಧಾರಾಕಾರ ಮಳೆಗೆ ಮೈದುಂಬಿ ಹರಿಯುವ ಕಾವೇರಿಯ ವೈಯಾರ ಹೀಗಿದೆ ನೋಡಿ-Video
ಮಂಡ್ಯ: ಕರ್ನಾಟಕದ ಜೀವನದಿ ಕಾವೇರಿ. ಈ ಜೀವನಾಡಿ ಹಾಗೂ ಇದರ ಇತರೆ ಉಪನದಿಗಳು ಭಾರಿ ಮಳೆಯ ಕಾರಣ ಮೈದುಂಬಿ ಹರಿಯುತ್ತಿವೆ. ಪರಿಣಾಮ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಆಸರೆಯಾಗಿರುವ ಕೆಆರ್‌ಎಸ್ ಜಲಾಶಯ ಕೂಡ ಭರ್ತಿಯಾಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅನಾವೃಷ್ಟಿ ಕಾರಣ ಬಣಗಟ್ಟುತ್ತಿದ್ದ ಜಲಾಶಯ ಈಗ ನೀರು ತುಂಬಿ ನಳನಳಿಸುತ್ತಿದೆ. ಜಲಾಶಯ ಭರ್ತಿಯಾಗಿರುವ ಕಾರಣ, ಹೊರ ಹರಿವು ಹೆಚ್ಚಿಸಲಾಗಿದೆ. ಹೀಗಾಗಿ ಕೆ ಆರ್ ಎಸ್ ಜಲಾಶಯದ ಎಲ್ಲ ಗೇಟ್‌ಗಳನ್ನ ಓಪನ್ ಮಾಡಲಾಗಿದ್ದು ಭಾರಿ ಪ್ರಮಾಣದ ನೀರು ಹೊರಹರಿಯುತ್ತಿದೆ. ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಜಿಲ್ಲೆಗಳಿಗೆ ಇದು ಸಹಕಾರಿಯಾಗಿದ್ದು, ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ.