ಹಿರಿಯರ ಮೇಲೆ ಕೈ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ವ್ಯಕ್ತಿಯಿಂದ ಹಲ್ಲೆ; ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದ ಘಟನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹಿರಿಯರ ಮೇಲೆ ಕೈ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ವ್ಯಕ್ತಿಯಿಂದ ಹಲ್ಲೆ; ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದ ಘಟನೆ

ಹಿರಿಯರ ಮೇಲೆ ಕೈ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ವ್ಯಕ್ತಿಯಿಂದ ಹಲ್ಲೆ; ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿ ನಡೆದ ಘಟನೆ

Dec 30, 2024 10:26 PM IST Rakshitha Sowmya
twitter
Dec 30, 2024 10:26 PM IST

ಹಿರಿಯರ ಮೇಲೆ ಕೈ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬ ಪೊಲೀಸ್‌ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪೊಲೀಸ್‌ ಸ್ಟೇಷನ್‌ನಲ್ಲಿ ನಡೆದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಲಕ್ಷ್ಮೀನಾರಾಯಣ ಹಾಗೂ ಸಾಗರ್‌ ಎಂಬುವರ ನಡುವೆ ಜಗಳ ನಡೆದಿತ್ತು. ಈ ಕೇಸ್‌ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಮೊದಲು ಸಾಗರ್‌ ಅಲ್ಲಿಗೆ ಬಂದಿದ್ದಾನೆ. ನಂತರ ಲಕ್ಷ್ಮೀನಾರಾಯಣ್‌ ಬಂದಿದ್ದಾರೆ. ಆತ ಪೊಲೀಸ್ ಸ್ಟೇಷನ್‌ ಬಳಿ ಬಂದು ಅಲ್ಲಿಂದ ಚೇರ್‌ ಮೇಲೆ ಕೂರಲು ಹೋಗಿದ್ದಾರೆ. ಆದರೆ ಸಾಗರ್‌ ಬಂದು ಆ ಚೇರನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಹಿರಿಯರ ಬಳಿ ಈ ರೀತಿ ವರ್ತಿಸುತ್ತಿದ್ದನ್ನು ನೋಡಿದ ಪೊಲೀಸ್ ಕಾನ್‌ಸ್ಟೇಬಲ್‌, ಸಾಗರ್‌ಗೆ ಮೆಲ್ಲಗೆ ಒಂದು ಏಟು ಕೊಟ್ಟಿದ್ಧಾರೆ. ಇಷ್ಟಕ್ಕೆ ಕೋಪಗೊಂಡ ಸಾಗರ್‌, ಆ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾನೆ. ಈ ವಿಡಿಯೋ ವೈರಲ್‌ ಆಗುತ್ತಿದ್ದು ಸಾಗರ್‌ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

More