Mangalore : ಕಾಳಿಂಗ ಸರ್ಪದ ಮೇಲೆ ಕಾಲಿಟ್ಟ ಮಹಿಳೆ ಎಸ್ಕೇಪ್ ; ಸೆರೆ ಸಿಕ್ಕ ಭಾರೀ ಗಾತ್ರದ ಹಾವು
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಬಂಟ್ವಾಳ ತಾಲೂಕಿನ ಪಂಜಿಕಲ್ ನ ಮನೆಯೊಂದರ ಬಳಿ ಪ್ರತ್ಯಕ್ಷವಾಗಿದೆ. ಗೊತ್ತಿಲ್ಲದೇ ಕಾಳಿಂಗನ ಮೇಲೆ ಕಾಲಿಟ್ಟ ಮನೆಯೊಡತಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಬಂಟ್ವಾಳ ತಾಲೂಕಿನ ಪಂಜಿಕಲ್ ನ ನಾರಾಯಣ ಬಂಗೇರರ ಮನೆಯಂಗಳದಲ್ಲಿ ಈ ಕಾಳಿಂಗ ಸರ್ಪ ಕಾಣಸಿಕ್ಕಿದೆ. ಮನೆಯೊಡತಿ ರೋಹಿಣಿಯವರು ತೋಟದಿಂದ ಮನೆ ಕಡೆಗೆ ಬರುವಾಗ ಕಾಲಿಗೆ ಏನೋ ಸ್ಪರ್ಶಿದಂತಾಗಿದೆ. ನೋಡಿದರೆ ಅವರು ಕಾಳಿಂಗನನ್ನೇ ತುಳಿದಿದ್ದರು. ಬೆದರಿದ ಅವರು ತಕ್ಷಣ ಈಚೆ ಬಂದಿದ್ದು, ಕೂದಲೆಳೆಯ ಅಂತರದಿಂದ ರೋಹಿಣಿಯವರು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಅವರು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಹಳ ಕೋಪದಿಂದಿದ್ದ ಕಾಳಿಂಗ ಸರ್ಪವನ್ನು ಸುಮಾರು ಹೊತ್ತಿನ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಹಿಡಿದಿದ್ದಾರೆ.