ಟೈಟು ಟೈಟು ಫುಲ್ ಟೈಟು.. ಮಂಗಳೂರಿನ ಎಜೆ ಆಸ್ಪತ್ರೆಯ ಐಸಿಯುಗೆ ಕುಡಿದು ಟೈಟಾಗಿ ಬಂದ್ರಾ ಡಾಕ್ಟರ್? ವಿಡಿಯೋ ನೋಡಿ
- ಮಂಗಳೂರಿನ ಪ್ರತಿಷ್ಠಿತ ಎಜೆ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಪಾನಮತ್ತನಾಗಿ ಐಸಿಯುಗೆ ಪ್ರವೇಶಿಸಿರುವ ವಿಡಿಯೋ ವೈರಲ್ ಆಗಿದೆ. ಈತ ಎಜೆಯ ಕಲಿಕಾ ವೈದ್ಯ ಎನ್ನಲಾಗಿದ್ದು, ಕುಡಿದ್ದು ಎಲ್ಲೋ ಬಿದ್ದು ಮೈಗೆಲ್ಲಾ ಕೆಸರು ಮೆತ್ತಿಕೊಂಡು ಐಸಿಯುಗೆ ಬಂದು ಕುಳಿತಿದ್ದ ಎನ್ನಲಾಗಿದೆ. ಇದನ್ನ ಗಮನಿಸಿದ ರೋಗಿಯ ಸಂಬಂಧಿಕರು ವಿಡಿಯೋ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಸೆಕ್ಯುರಿಟಿ ಕುಡಿದು ಬಂದ ವೈದ್ಯನನ್ನ ಹೊರಗೆ ಕಳಿಸಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.