ಕೆತ್ತಿಕ್ಕಲ್ ಗುಡ್ಡ ಕುಸಿತ ಪ್ರದೇಶದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್- ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕೆತ್ತಿಕ್ಕಲ್ ಗುಡ್ಡ ಕುಸಿತ ಪ್ರದೇಶದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್- ವಿಡಿಯೋ

ಕೆತ್ತಿಕ್ಕಲ್ ಗುಡ್ಡ ಕುಸಿತ ಪ್ರದೇಶದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್- ವಿಡಿಯೋ

Aug 02, 2024 04:52 PM IST Umesh Kumar S
twitter
Aug 02, 2024 04:52 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದು, ಮಳೆ ಹಾನಿ ಪ್ರದೇಶಗಳ ಜನರ ಸಮಸ್ಯೆಗಳನ್ನು ಶುಕ್ರವಾರ (ಆಗಸ್ಟ್ 2) ಆಲಿಸಿದರು. ಇದಾದ ಬಳಿಕ ಕೆತ್ತಿಕ್ಕಲ್ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕುಸಿಯುವ ಹಂತದಲ್ಲಿರುವ ಕೆತ್ತಿಕಲ್ ಗುಡ್ಡದ ಅಲ್ಲಿನ ಪರಿಸ್ಥಿತಿ ನೋಡಿ ದಂಗಾದರು. 

ಕೆತ್ತಿಕಲ್ ಗುಡ್ಡ ನೋಡಿದ್ರೆ ಭಯ ಆಗುತ್ತೆ, ಇದನ್ನು ತಡೆಯೋದು ಹೇಗೆ ಎಂದು ಸಚಿವ ದಿನೇಶ್ ಗುಂಡೂರಾವ್‌ ಆತಂಕ ವ್ಯಕ್ತ ಪಡಿಸಿದರಲ್ಲದೆ, ಮೇಲ್ಭಾಗದಲ್ಲಿ ನೂರಾರು ಮನೆಗಳು ಜನವಸತಿ ಪ್ರದೇಶ ಇದೆ. ಗುಡ್ಡದ ಮಣ್ಣನ್ನ ಇಷ್ಟೊಂದು ಅಗಾಧ ಪ್ರಮಾಣದಲ್ಲಿ, ಅವೈಜ್ಞಾನಿಕವಾಗಿ ತೆಗೆಯಲು ಹೇಗೆ ಬಿಟ್ರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಇಲ್ಲಿನ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಅಂದ ಹಾಗೆ, ಮಂಗಳೂರು ನಗರದ ಹೊರವಲಯದಲ್ಲಿ ವಾಮಂಜೂರು ಸಮೀಪ ಈ ಗುಡ್ಡ ಇರುವಂಥದ್ದು.

More