Mangaluru Flood: ಫಲ್ಗುಣಿ ನದಿಯ ಅಬ್ಬರಕ್ಕೆ ಮಂಗಳೂರಿನ ಅದ್ಯಪ್ಪಾಡಿ, ಕೆತ್ತಿಕಲ್ ಪ್ರದೇಶ ಜಲಾವೃತ, ಸಚಿವರಿಂದ ಪರಿಶೀಲನೆ
- ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಪ್ರತಿ ಬಾರಿಯಂತೆ ಮಳೆ ಹೆಚ್ಚಾದಂತೆ ಫಲ್ಗುಣಿ ನದಿ ಉಕ್ಕಿ ಹರಿದಿದ್ದು, ಅದ್ಯಪ್ಪಾಡಿ ಮತ್ತು ಕೆತ್ತಿಕಲ್ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅತಿವೃಷ್ಟಿ ಬಾಧಿತ ಅದ್ಯಪಾಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ವರ್ಷ ಅದ್ಯಪಾಡಿಯಲ್ಲಿ ಫಲ್ಗುಣಿ ನದಿಯ ನೆರೆ ಪ್ರವಾಹದಿಂದ ಸಂತ್ರಸ್ತರಾಗುತ್ತಿರುವ ಬಗ್ಗೆ ಸ್ಥಳೀಯರು ಸಚಿವರ ಗಮನ ಸೆಳೆದರು. ಅಕ್ಕಪಕ್ಕದ ಗ್ರಾಮಗಳು ಜಲಾವೃತವಾಗಿರುವ ಬಗ್ಗೆಯೂ ಮಾಹಿತಿ ನೀಡಿದರು.