Viral Video; ಕಾಲೇಜು ವಿದ್ಯಾರ್ಥಿನಿಗೆ ಆಳ ಸಮುದ್ರ ಮೀನುಗಾರಿಕೆ ವೃತ್ತಿ ಕೌಶಲ ಪ್ರಾಪ್ತಿ, ಬಾಲಕಿಯಾಗಿರುವಾಗಲೇ ಬೋಟ್ ಏರಿದವಳ ಯಶೋಗಾಥೆ
Prapthi Mendon; ಮಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಮಳೆಗಾಲದಲ್ಲೂ ಆಳಕಡಲಿಗೆ ಹೋಗಿ ರಾಣಿಬಲೆ ಮೀನುಗಾರಿಕೆ ನಡೆಸಿ ಗಮನ ಸೆಳೆದಿದ್ದಾರೆ. ಬೆಂಗ್ರೆಯ ಮತ್ಸೋದ್ಯಮಿ ಜಯಪ್ರಕಾಶ್ ಮೆಂಡನ್ ಹಾಗೂ ಕಲಾವತಿ ಜೆ. ದಂಪತಿಯ ಪುತ್ರಿ ಪ್ರಾಪ್ತಿಯೇ ಈ ಗಟ್ಟಿಗಿತ್ತಿ. ಈಕೆ ಮಂಗಳೂರಿನ ಫಿಶರೀಸ್ ಕಾಲೇಜಿನಲ್ಲಿ ಫಿಶರೀಶ್ ಪದವಿ ಪಡೆದಿದ್ದು ಸದ್ಯ ಇದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ನಡುವೆಯೇ ಆಕೆ ತನ್ನ ತಂದೆಯ ಮಾಲಕತ್ವದ ಜೈ ವಿಕ್ರಾಂತ್ ಬೆಂಗ್ರೆ ರಾಣಿಬಲೆ ತಂಡದೊಂದಿಗೆ ಮೀನುಗಾರಿಕೆಯನ್ನೂ ನಡೆಸುತ್ತಾರೆ. ಕಳೆದ 10ವರ್ಷಗಳಿಂದ ಈಕೆ ತಂದೆಯೊಂದಿಗೆ ಆಳ ಸಮುದ್ರಕ್ಕೆ ಹೋಗಿ ಮೀನುಗಾರಿಕೆ ಮಾಡುತ್ತಿದ್ದಾರೆ. ತನ್ನ 14ರ ವಯಸ್ಸಿನಿಂದಲೇ ಬೋಟ್ ಏರಿ ಮೀನುಗಾರಿಕೆಯನ್ನು ಮಾಡುತ್ತಿದ್ದಾರೆ. ಸದ್ಯ ಮಳೆಗಾಲದಲ್ಲೂ ಮೀನುಗಾರಿಕೆ ತಂಡದೊಂದಿಗೆ ಪಳಗಿ ರಾಣಿಬಲೆ ಮೀನುಗಾರಿಕೆ ಮಾಡುತ್ತ ನಾಡಿನ ಗಮನಸೆಳೆದಿದ್ದಾರೆ.