Sriramulu : ಈ ಮೋಕಾ ನಂದು, ತಾಕತ್ ಇದ್ರೆ ಬಂದ್ ಲೀಡ್ ತಗೊಂಡ್ ತೋರ್ಸಿ: ರಾಮುಲುಗೆ ಬಹಿರಂಗ ಸವಾಲ್
ಕೆಂಪೇಗೌಡ ಸಿನಿಮಾದ ಆರುಮುಗ ಡೈಲಾಗ್ ರೀತಿ ಸಚಿವ ನಾಗೇಂದ್ರ ಬಿಜೆಪಿ ಅಭ್ಯರ್ಥಿ ಶ್ರೀರಾಮುಲುಗೆ ಸವಾಲಾಕಿದ್ದಾರೆ. ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ನಾಗೇಂದ್ರರಿಂದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾವು ಬಳ್ಳಾರಿಯಲ್ಲಿ ಕಾಂಗ್ರೆಸ್ ನಿಂದ ಐದು ಜನ ಪಂಚ ಪಾಂಡವರಂತೆ ಗೆದ್ದಿದ್ದೇವೆ. ಈ ಬಾರಿ ನಮ್ಮ ಪಾಂಡವರ ಪರವಾಗಿ ಅರ್ಜುನನ್ನ (ತುಕಾರಾಂ) ಕಣಕ್ಕಿಳಿಸಿದ್ದೇವೆ. ಅವರೇ ಈ ಬಾರಿ ಗೆಲ್ಲೋದು ಎಂದು ಬಿ ನಾಗೇಂದ್ರ ಹೇಳಿದ್ದಾರೆ.