Salman Khan : ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಬಳಿಯೇ ಆಗಂತುಕರಿಂದ ಗುಂಡಿನ ದಾಳಿ ; ತೀವ್ರ ತನಿಖೆ
ಅಪರಿಚಿತ ವ್ಯಕ್ತಿಗಳು ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಮುಂದೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಬೈಕ್ ನಲ್ಲಿ ಬಂದಿರುವ ಅಪರಿಚಿತರು, ಬಾಂದ್ರಾದಲ್ಲಿರುವ ಗೆಲಾಕ್ಸಿ ಅಪಾರ್ಟ್ ಮೆಂಟ್ ಮುಂದೆ ಗುಂಡು ಹಾರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸದೇ ಇದ್ದರೂ, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದು, ಆಗಂತುಕರ ಪತ್ತೆಗೆ ಬಲೆ ಬೀಸಿದ್ದಾರೆ.