Mysore Jamboo Savari: ಮೈಸೂರು ದಸರಾ ಜಂಬೂಸವಾರಿಗೆ ಗಜಪಡೆಯ ಎರಡನೇ ತಂಡ ಆಗಮನ; ತಾಲೀಮು ಶುರು
- Mysore Dasara Jamboo Savari: ದಸರಾ ಗಜಪಡೆಯ ಎರಡನೇ ತಂಡದ ಆನೆಗಳು ಮೈಸೂರಿಗೆ ಆಗಮನವಾಗಿದೆ. ಮತ್ತಿಗೋಡು ಆನೆ ಶಿಬಿರದ ಮಹೇಂದ್ರ, ದುಬಾರೆ ಶಿಬಿರದ ಸುಗ್ರೀವ, ಪ್ರಶಾಂತ್, ದೊಡ್ಡಹರವೆ ಶಿಬಿರದ ಲಕ್ಷ್ಮಿ ಹಾಗೂ ರಾಮಾಪುರ ಆನೆಶಿಬಿರದ ಹಿರಣ್ಯಾ ಆನೆಗಳು ಮೈಸೂರಿಗೆ ಆಗಮಿಸಿವೆ. ಲಾರಿಗಳ ಮೂಲಕ ಮೈಸೂರಿಗೆ ಬಂದಿಳಿದ ಐದು ಆನೆಗಳ ತೂಕ ಪರೀಕ್ಷೆ ಮಾಡಲಾಗಿದ್ದು, ಇಂದಿನಿಂದ ತಾಲೀಮು ಶುರುವಾಗಲಿವೆ.