ಜನವರಿ 26ರಿಂದ ಸುತ್ತೂರು ಜಾತ್ರಾ ಮಹೋತ್ಸವ ಆರಂಭ; 20 ಲಕ್ಷ ಭಕ್ತರಿಗಾಗಿ ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಶ್ರೀಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಜನವರಿ 26ರಿಂದ ಸುತ್ತೂರು ಜಾತ್ರಾ ಮಹೋತ್ಸವ ಆರಂಭ; 20 ಲಕ್ಷ ಭಕ್ತರಿಗಾಗಿ ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಶ್ರೀಗಳು

ಜನವರಿ 26ರಿಂದ ಸುತ್ತೂರು ಜಾತ್ರಾ ಮಹೋತ್ಸವ ಆರಂಭ; 20 ಲಕ್ಷ ಭಕ್ತರಿಗಾಗಿ ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಶ್ರೀಗಳು

Jan 25, 2025 03:44 PM IST Rakshitha Sowmya
twitter
Jan 25, 2025 03:44 PM IST

ಜನವರಿ 26 ರಿಂದ ಮೈಸೂರು ಸುತ್ತೂರು ಜಾತ್ರಾ ಮಹೋತ್ಸವ ಆರಂಭವಾಗಲಿದೆ, ಜನವರಿ 31 ರವರೆಗೆ 6 ದಿನಗಳ ಕಾಲ ಜಾತ್ರೆ ನಡೆಯಲಿದ್ದು ಮಹಾದಾಸೋಹಕ್ಕೆ ಶನಿವಾರ, ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದಾರೆ. ಜಾತ್ರೆಗೆ ಸುಮಾರು 20 ಲಕ್ಷ ಮಂದಿ ಆಗಮಿಸುವ ಸಾಧ್ಯತೆ ಇದೆ. ಬರುವ ಭಕ್ತರಿಗಾಗಿ ಪ್ರತಿದಿನ ಊಟದ ವ್ಯವಸ್ಥೆ ಮಾಡಲಾಗಿದೆ. 6 ದಿನಗಳ ಪ್ರಸಾದ ತಯಾರಿಕೆಗಾಗಿ ಸುಮಾರು 1 ಸಾವಿರ ಕ್ವಿಂಟಾಲ್‌ ಅಕ್ಕಿ, 240 ಕ್ವಿಂಟಾಲ್‌ ತೊಗರಿಬೇಳೆ, 200 ಕ್ವಿಂಟಾಲ್‌ ಸಕ್ಕರೆ, 500 ಕಿಲೋ ನಂದಿನಿ ತುಪ್ಪ, 8 ಸಾವಿರ ಲೀಟರ್‌ ಹಾಲು, 28 ಸಾವಿರ ಲೀಟರ್‌ ಮೊಸರು, 25 ಸಾವಿರ ತೆಂಗಿನಕಾಯಿ, 5000 ಕಿಲೋ ಉಪ್ಪಿನಕಾಯಿ ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

More