ಮೈಸೂರು: ಟೀಚರ್ ಪಾಠ ಮಾಡದೆ, ಮೊಬೈಲ್ ನೋಡುತ್ತಾರೆ, ಹೆಚ್‌ಡಿ ಕೋಟೆ ಶಾಸಕರಿಗೆ ದೂರು ನೀಡಿದ ವಿದ್ಯಾರ್ಥಿಗಳು
ಮೈಸೂರು: ಶಿಕ್ಷಕರು ಪಾಠ ಮಾಡುವುದಿಲ್ಲ, ಬಿಸಿ ಊಟ ಕೂಡಾ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಶಾಸಕರಿಗೆ ದೂರು ನೀಡಿರುವ ಘಟನೆ ಮೈಸೂರು ಜಿಲ್ಲೆ ಹೆಚ್‌ಡಿ ಕೋಟಿ ತಾಲೂಕಿನಲ್ಲಿ ನಡೆದಿದೆ. ಹೆಚ್‌ಡಿ ಕೋಟೆ ತಾಲೂಕು ಆಡಳಿತ ಸೌಧಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಅಲ್ಲಿ ಸಾಲಿನಲ್ಲಿ ನಿಂತು ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಭೇಟಿ ಮಾಡಿದರು. ಇದಕ್ಕೂ ಮುನ್ನ ನಮ್ಮ ಸಮಸ್ಯೆಯನ್ನು ಬಿಇಓ ಬಳಿ ಹೇಳಿಕೊಂಡಿದ್ದೆವು, ಆದರೆ ಅವರು ನಮ್ಮ ಸಮಸ್ಯೆನ್ನು ಪರಿಹರಿಸಿಲ್ಲ. ಟೀಚರ್‌ಗಳು ಪಾಠ ಮಾಡದೆ ಮೊಬೈಲ್ ನೋಡುತ್ತಾ ಕೂರುತ್ತಾರೆ, ನಮಗೆ ಬಿಸಿಯೂಟ ಕೂಡಾ ನೀಡುತ್ತಿಲ್ಲ ಎಂದು ಮಕ್ಕಳು ಶಾಸಕರ ಬಳಿ ಮನವಿ ಮಾಡಿದ್ದಾರೆ.