ಮೈಸೂರಿನಲ್ಲಿದ್ದ ಪ್ರಸಿದ್ಧ ತುಳುನಾಡಿನ ದೈವ ಕೊರಗಜ್ಜ ದೇವಸ್ಥಾನ ಈ ಕಾರಣಕ್ಕೆ ನೆಲಸಮ; ಕರಾವಳಿಗರು ಅಸಮಾಧಾನ
- Koragajja Swamy Temple: ರಾಜಕಾಲುವೆ ಮೇಲೆ ನಿರ್ಮಿಸಲಾಗಿದ್ದ ಕೊರಗಜ್ಜ ದೇವಾಲಯವನ್ನು ಮೈಸೂರು ಜಿಲ್ಲಾಡಳಿತ ನೆಲಸಮ ಮಾಡಿದೆ. ಕೇರ್ಗಳ್ಳಿ ಗ್ರಾಮದ ಸರ್ವೆ ನಂ.60ರಲ್ಲಿ ಹಾದುಹೋಗಿದ್ದ ರಾಜಕಾಲುವೆ ಒತ್ತುವರಿ ಆಗಿದೆ ಎಂಬ ದೂರನ್ನು ಪರಿಶೀಲಿಸಿದ ತಾಲೂಕು ಉಪವಿಭಾಗಾಧಿಕಾರಿ ಕೆಆರ್ ರಕ್ಷಿತ್ ನೆಲಸಮಕ್ಕೆ ಆದೇಶಿಸಿದ್ದಾರೆ. ಅದರಂತೆ, ತಹಸೀಲ್ದಾರ್ ಕೆಎಂ ಮಹೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ದೇವಾಲಯ ನೆಲಸಮ ಮಾಡಿದ್ದಾರೆ.