New Year 2025: ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಜನವರಿ 1 ರಂದು 2 ಲಕ್ಷ ತಿರುಪತಿ ಮಾದರಿ ಲಾಡು ಪ್ರಸಾದ ಹಂಚಿಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  New Year 2025: ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಜನವರಿ 1 ರಂದು 2 ಲಕ್ಷ ತಿರುಪತಿ ಮಾದರಿ ಲಾಡು ಪ್ರಸಾದ ಹಂಚಿಕೆ

New Year 2025: ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಜನವರಿ 1 ರಂದು 2 ಲಕ್ಷ ತಿರುಪತಿ ಮಾದರಿ ಲಾಡು ಪ್ರಸಾದ ಹಂಚಿಕೆ

Dec 31, 2024 04:20 PM IST Rakshitha Sowmya
twitter
Dec 31, 2024 04:20 PM IST

ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. 2025ನ್ನು ಸ್ವಾಗತಿಸಲು ಜನರು ಸಂಭ್ರಮದಿಂದ ಕಾಯುತ್ತಿದ್ದಾರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂಡಾ ಹೊಸ ವರ್ಷ ಆಚರಿಸಲು ವಾರದಿಂದಲೇ ತಯಾರಿ ಜೋರಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ವಿಜಯನಗರದಲ್ಲಿರುವ ಯೋಗಾನರಸಿಂಹ ದೇವಸ್ಥಾನದಲ್ಲಿ ಕೂಡಾ ಹೊಸ ವರ್ಷಕ್ಕೆ ಎಲ್ಲಾ ತಯಾರಿ ನಡೆದಿದೆ. ಈ ದೇವಸ್ಥಾನದಲ್ಲಿ ಬಹಳ ವರ್ಷಗಳಿಂದ ಹೊಸ ವರ್ಷದಂದು ಭಕ್ತರಿಗೆ ಲಡ್ಡು ಹಂಚುತ್ತಾ ಬರಲಾಗಿದೆ. ಈ ವರ್ಷವೂ ಲಡ್ಡು ತಯಾರಿ ಜೊರಾಗಿದೆ. 100 ಜನ ಬಾಣಸಿಗರು ಲಾಡು ತಯಾರಿಕೆಯಲ್ಲಿ ಮುಳುಗಿದ್ದು ಡಿಸೆಂಬರ್‌ 20ರಿಂದಲೇ ಲಾಡು ತಯಾರಿಸಲಾಗುತ್ತಿದೆ. ಜನವರಿ 1 ರಂದು ಬೆಳಗ್ಗೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಸುಮಾರು 2 ಲಕ್ಷ ತಿರುಪತಿ ಮಾದರಿ ಲಾಡುಗಳನ್ನು ಭಕ್ತರಿಗೆ ಹಂಚಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

More