Hassan:ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಅಂತ ಬಂದ್ರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ - ಪ್ರೀತಂ ಗೌಡ
ಬಿಜೆಪಿ ಜೊತೆಗೆ ಲೋಕಸಭೆ ಚುನಾವಣೆಗೆ ಮೈತ್ರಿ ಅಂತ ಬಂದಿರೋ ಜೆಡಿಎಸ್ ಬಗ್ಗೆ ಮಾಜಿ ಶಾಸಕ ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ. ಮೈತ್ರಿ ಬಗ್ಗೆ ಬಿಜೆಪಿಯ ಯಾವುದೇ ಮುಖಂಡರು, ನಿರ್ಧಾರ ತೆಗೆದುಕೊಳ್ಳುವ ನಾಯಕರು ಮೈತ್ರಿ ಎಂದು ಹೇಳಿಲ್ಲ, ಮೈತ್ರಿ ಎಂದು ಹೇಳಿರುವವರು ಯಾರು ಎಂದು ಗಮನಿಸಬೇಕು ಎಂದಿದ್ದಾರೆ. ಅಲ್ಲದೆ ಮೋದಿಯವರು ಪ್ರಧಾನಮಂತ್ರಿ ಆಗಬೇಕೆಂದು ಯಾರೆಲ್ಲಾ ಇಷ್ಟಪಟ್ಟು ಬರ್ತಾರೆ, ಬೆಂಬಲ ಕೊಡ್ತಾರೆ ಅದಕ್ಕೆ ಸ್ವಾಗತ ಇದೆ, ಆದರ ಅವರ ಕಾರ್ಯಕರ್ತರನ್ನು, ಪಕ್ಷ ಉಳಿಸಿಕೊಳ್ಳಬೇಕು ಎನ್ನುವುದಕ್ಕೆ ಮೈತ್ರಿ ಪ್ರಸ್ತಾಪ ಮಾತನಾಡಿದರೆ ಅದಕ್ಕೆ ಬೆಂಬಲ ಇಲ್ಲ ಎಂದಿದ್ದಾರೆ. ನಾನೊಬ್ಬ ಕಾರ್ಯಕರ್ತ ಹಿಡನ್ ಅಜೆಂಡಾ ಇಟ್ಕೊಂಡು, ಅವರ ಪಕ್ಷ, ಪಕ್ಷದ ಕಾರ್ಯಕರ್ಯರನ್ನು ಉಳಿಸಿಕೊಳ್ಳಲು ಮೈತ್ರಿ ಮಾಡಿಕೊಂಡರೆ ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರು ಒಪ್ಪೋದಿಲ್ಲ ಅಂತ ಹೆಚ್ ಡಿ ಕುಮಾರ ಸ್ವಾಮಿಗೆ ಪ್ರೀತಂಗೌಡ ಟಾಂಗ್ ಕೊಟ್ಟಿದ್ದಾರೆ.