ಇಂಥ ರಾಜ್ಯಪಾಲರನ್ನು ಇದುವರೆಗೂ ನೋಡಿಲ್ಲ, ಇವರೇಕೆ ದಿನಂಪ್ರತಿ ವರದಿ ಕೇಳ್ತಿದ್ದಾರೋ ಗೊತ್ತಿಲ್ಲ: ಗೃಹ ಸಚಿವ ಜಿ ಪರಮೇಶ್ವರ-political news no examples of guv seeking info on daily decisions of the govt karnataka hm parameswara uks ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಇಂಥ ರಾಜ್ಯಪಾಲರನ್ನು ಇದುವರೆಗೂ ನೋಡಿಲ್ಲ, ಇವರೇಕೆ ದಿನಂಪ್ರತಿ ವರದಿ ಕೇಳ್ತಿದ್ದಾರೋ ಗೊತ್ತಿಲ್ಲ: ಗೃಹ ಸಚಿವ ಜಿ ಪರಮೇಶ್ವರ

ಇಂಥ ರಾಜ್ಯಪಾಲರನ್ನು ಇದುವರೆಗೂ ನೋಡಿಲ್ಲ, ಇವರೇಕೆ ದಿನಂಪ್ರತಿ ವರದಿ ಕೇಳ್ತಿದ್ದಾರೋ ಗೊತ್ತಿಲ್ಲ: ಗೃಹ ಸಚಿವ ಜಿ ಪರಮೇಶ್ವರ

Sep 23, 2024 06:58 PM IST Umesh Kumar S
twitter
Sep 23, 2024 06:58 PM IST

ಬೆಂಗಳೂರು: ರಾಜ್ಯಪಾಲರದ್ದು ಅತ್ಯಂತ ಜವಾಬ್ದಾರಿಯುತ ಮತ್ತು ಗೌರವಯುತ ಸ್ಥಾನ. ಇದೇ ಮೊದಲ ಸಲ ರಾಜ್ಯ ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. ದಿನನಿತ್ಯ ಆಡಳಿತ ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ಮತ್ತು ಸರ್ಕಾರಕ್ಕೆ ಇದೆ. ಆದರೆ, ಪ್ರಥಮಬಾರಿಗೆ ರಾಜ್ಯಪಾಲರು, ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುವುದಾಗಲಿ ಅಥವಾ ಮಧ್ಯಪ್ರವೇಶಿಸುವುದನ್ನಾಗಲಿ ಎಲ್ಲಿಯೂ ಕೇಳಿಲ್ಲ‌ ಎಂದರು. ನನ್ನ 35 ವರ್ಷದ ರಾಜಕೀಯ ಬದುಕಿನಲ್ಲಿ ಅನೇಕ ರಾಜ್ಯಪಾಲರನ್ನು ಮತ್ತು ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಇಂತಹ ಸಂದರ್ಭ ಯಾವತ್ತೂ ಬಂದಿಲ್ಲ. ರಾಜ್ಯಪಾಲರು ಸರ್ಕಾರದ ಪ್ರತಿನಿತ್ಯದ ಕೆಲಸಗಳು ಮತ್ತು ತೀರ್ಮಾನಗಳ ಬಗ್ಗೆ ಮಾಹಿತಿ ಕೊಡಿ ಅಂತ ಕೇಳಿದ್ದ ಉದಾಹರಣೆಗಳೇ ಇಲ್ಲ ಎಂದು ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

More