ಸ್ವರ್ಣಮಂದಿರದಲ್ಲಿ ರಾಹುಲ್ ಗಾಂಧಿ ಸೇವೆ;ಪಾತ್ರೆ ತೊಳೆದು ಅಡುಗೆಗೆ ಕೈ ಜೋಡಿಸಿದ ಕಾಂಗ್ರೆಸ್ ನಾಯಕ
ಪಂಜಾಬ್ ನ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್ ನಲ್ಲಿ ಕಾಂಗ್ರೆಸ್ ನಾಯರ ರಾಹುಲ್ ಗಾಂಧಿ ಸೇವಾನಿರತರಾಗಿದ್ದಾರೆ. ನಿನ್ನೆ ದೇವಾಲಯದಲ್ಲಿ ಪಾತ್ರೆ ತೊಳೆದು, ಊಟಕ್ಕೆ ಬಟ್ಟಲು ಹಂಚಿದ್ದಾರೆ. ಇಂದು ಅಡುಗೆ ಕೆಲಸಕ್ಕೆ ಕೈ ಜೋಡಿಸುವ ಮೂಲಕ ಸೇವೆ ಮಾಡಿದ್ದಾರೆ. ಪಾಲ್ಕಿ ಸೇವೆಯಲ್ಲೂ ರಾಹುಲ್ ಭಾಗಿಯಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಹುಲ್ ಗಾಂಧಿ ಅವರು ಪಂಜಾಬ್‌ಗೆ ಆಗಮಿಸಿರುವುದು ತಮ್ಮ ವೈಯಕ್ತಿಕ ಮತ್ತು ಆಧ್ಯಾತ್ಮಿಕ ಭೇಟಿಯಾಗಿದೆ. ಅವರ ಖಾಸಗಿತನವನ್ನು ಗೌರವಿಸೋಣ ಎಂದಿದ್ದಾರೆ.