ಭೈರಾದೇವಿ ಸಿನಿಮಾ ನೋಡುತ್ತಿದ್ದಾಗ ಮಹಿಳೆಯ ವಿಚಿತ್ರ ವರ್ತನೆ! ಗಂಡಸರಿಗೂ ಬಗ್ಗದ ಆಕೆಗೆ ಇರುವುದು ಅದೆಂಥ ಶಕ್ತಿ?-radhika kumaraswamy bhairadevi special screening a woman was overwhelmed by the spirit while watching bhairadevi mnk ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಭೈರಾದೇವಿ ಸಿನಿಮಾ ನೋಡುತ್ತಿದ್ದಾಗ ಮಹಿಳೆಯ ವಿಚಿತ್ರ ವರ್ತನೆ! ಗಂಡಸರಿಗೂ ಬಗ್ಗದ ಆಕೆಗೆ ಇರುವುದು ಅದೆಂಥ ಶಕ್ತಿ?

ಭೈರಾದೇವಿ ಸಿನಿಮಾ ನೋಡುತ್ತಿದ್ದಾಗ ಮಹಿಳೆಯ ವಿಚಿತ್ರ ವರ್ತನೆ! ಗಂಡಸರಿಗೂ ಬಗ್ಗದ ಆಕೆಗೆ ಇರುವುದು ಅದೆಂಥ ಶಕ್ತಿ?

Sep 30, 2024 12:16 PM IST Manjunath B Kotagunasi
twitter
Sep 30, 2024 12:16 PM IST

  • ಶಮಿಕ ಎಂಟರ್ಪ್ರೈಸಸ್ ಬ್ಯಾನರ್‌ನಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ನಾಯಕಿಯಾಗಿಯೂ ನಟಿಸಿರುವ ಭೈರಾದೇವಿ ಸಿನಿಮಾ ಅಕ್ಟೋಬರ್ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ಚಿತ್ರತಂಡ, ರಾಜ್ಯಾದ್ಯಂತ ಸುತ್ತಾಟ ಆರಂಭಿಸಿ, ಜನರಿಗೆ ಸಿನಿಮಾ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದೀಗ ಸಿನಿಮಾ ಬಿಡುಗಡೆ ಎರಡ್ಮೂರು ದಿನ ಇದೆ ಎನ್ನುವಾಗಲೇ, ಬೇರೆ ವಿಚಾರಕ್ಕೆ ಈ ಸಿನಿಮಾ ಸದ್ದು ಮಾಡುತ್ತಿದೆ. ಸಿನಿಮಾ ವೀಕ್ಷಣೆ ವೇಳೆ ಮಹಿಳೆಯೊಬ್ಬರ ಮೇಲೆ ದೇವಿಯ ಆವಾಹನೆಯಾಗಿದೆ! ಹಾಡಿಗೆ ಅವರು ಕುಳಿತ ಕುರ್ಚಿಯ ಮೇಲಿಂದ ಎದ್ದು ಯದ್ವಾತದ್ವಾ ನೃತ್ಯ ಮಾಡುತ್ತಿದ್ದಾರೆ. ಮಹಿಳೆ ಹೀಗೆ ವರ್ತಿಸುತ್ತಿದ್ದಂತೆ, ಅವರ ಸಹಾಯಕ್ಕೆ ನಾಲ್ಕೈದು ಜನ ಗಂಡಸರು ಆಗಮಿಸಿದ್ದಾರೆ. ಅವರಿಗೂ ಬಗ್ಗದೇ ಹಾಡಿಗೆ ನೃತ್ಯ ಮಾಡಿದ್ದಾರೆ. ಕೊನೆಗೆ ಮಹಿಳೆಯನ್ನು ಚಿತ್ರಮಂದಿರದಿಂದ ಹೊತ್ತು ಸಾಗಿಸುವುದಕ್ಕೂ ಹರಸಾಹಸಪಡಬೇಕಾಯ್ತು.

More