ಮಂಗಳೂರು: ಅಕ್ರಮ ಚಟುವಟಿಕೆ ಆರೋಪ, ಮಸಾಜ್‌ ಪಾರ್ಲರ್‌ ಮೇಲೆ ದಾಳಿ ಮಾಡಿ ಪೀಠೋಪಕರಣ ಧ್ವಂಸ ಮಾಡಿದ ರಾಮಸೇನೆ ಕಾರ್ಯಕರ್ತರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಂಗಳೂರು: ಅಕ್ರಮ ಚಟುವಟಿಕೆ ಆರೋಪ, ಮಸಾಜ್‌ ಪಾರ್ಲರ್‌ ಮೇಲೆ ದಾಳಿ ಮಾಡಿ ಪೀಠೋಪಕರಣ ಧ್ವಂಸ ಮಾಡಿದ ರಾಮಸೇನೆ ಕಾರ್ಯಕರ್ತರು

ಮಂಗಳೂರು: ಅಕ್ರಮ ಚಟುವಟಿಕೆ ಆರೋಪ, ಮಸಾಜ್‌ ಪಾರ್ಲರ್‌ ಮೇಲೆ ದಾಳಿ ಮಾಡಿ ಪೀಠೋಪಕರಣ ಧ್ವಂಸ ಮಾಡಿದ ರಾಮಸೇನೆ ಕಾರ್ಯಕರ್ತರು

Jan 24, 2025 04:40 PM IST Rakshitha Sowmya
twitter
Jan 24, 2025 04:40 PM IST

ಮಂಗಳೂರು: ಬ್ಯೂಟಿ ಪಾರ್ಲರ್‌ಗಳಲ್ಲಿ ಅಕ್ರಮ ಚಟುವಟಿಕೆ ಪ್ರಕರಣಗಳು ಹಿಂದೆ ಸಾಕಷ್ಟು ವರದಿ ಆಗಿದೆ. ಇದೀಗ ಮಂಗಳೂರಿನ ಮತ್ತೊಂದು ಬ್ಯೂಟಿ ಪಾರ್ಲರ್‌ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಮಂಗಳೂರಿನ ಬಿಜೈ ಬಳಿ ಇರುವ ಕಲರ್ಸ್ ಯೂನಿಸೆಕ್ಸ್ ಪಾರ್ಲರ್ ಎಂಬ ಹೆಸರಿನಲ್ಲಿ ನಡೆಯುತ್ತಿದ್ದ ಮಸಾಜ್ ಪಾರ್ಲರ್‌ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದ ಮೇಲೆ ರಾಮಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪಾರ್ಲರ್‌ನಲ್ಲಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಮಸಾಜ್‌ ಪಾರ್ಲರ್‌ನವರು ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ್ ಹಾಗೂ 9ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ.ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

More