Alia bhatt : ಆಲಿಯಾ ಭಟ್ ಜೊತೆ ಫ್ಯಾಷನ್ ಶೋನಲ್ಲಿದ್ದ ರಣವೀರ್ ಸಿಂಗ್ ; ಪತ್ನಿ ದೀಪಿಕಾ ಕಂಡು ಓಡೋಡಿ ಬಂದು ಮುತ್ತು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Alia Bhatt : ಆಲಿಯಾ ಭಟ್ ಜೊತೆ ಫ್ಯಾಷನ್ ಶೋನಲ್ಲಿದ್ದ ರಣವೀರ್ ಸಿಂಗ್ ; ಪತ್ನಿ ದೀಪಿಕಾ ಕಂಡು ಓಡೋಡಿ ಬಂದು ಮುತ್ತು

Alia bhatt : ಆಲಿಯಾ ಭಟ್ ಜೊತೆ ಫ್ಯಾಷನ್ ಶೋನಲ್ಲಿದ್ದ ರಣವೀರ್ ಸಿಂಗ್ ; ಪತ್ನಿ ದೀಪಿಕಾ ಕಂಡು ಓಡೋಡಿ ಬಂದು ಮುತ್ತು

Published Jul 21, 2023 03:58 PM IST Prashanth BR
twitter
Published Jul 21, 2023 03:58 PM IST

  • ಬಾಲಿವುಡ್ ಸೂಪರ್ ಸ್ಟಾರ್ ಗಳಾದ ರಣವೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಆಗಾಗ್ಯೆ ಗಮನ ಸೆಳೆಯುತ್ತಿರುತ್ತದೆ. ಅತ್ಯಂತ ಪ್ರೀತಿ ಪಾತ್ರವಾಗಿರುವ ಈ ಜೋಡಿ ಜೊತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದ್ದಾರೆ. ಇದೀಗ ಫ್ಯಾಷನ್ ಷೋ ಒಂದರಲ್ಲಿ ಅಲಿಯಾ ಭಟ್ ಜೊತೆ ರ‍್ಯಾಂಪ್ ವಾಕ್ ಮಾಡುತ್ತಿದ್ದಾಗ ಪತ್ನಿ ದೀಪಿಕಾ ಪಡುಕೋಣೆಯನ್ನ ಕಂಡಿದ್ದಾರೆ. ತಕ್ಷಣ ಓಡೋಡಿ ಬಂದ ರಣವೀರ್ ಸಿಂಗ್ ತನ್ನ ಪತ್ನಿ ದೀಪಿಕಾಗೆ ಮುತ್ತು ಕೊಟ್ಟಿದ್ದಾರೆ. ಅಲ್ಲದೆ ಪಕ್ಕದಲ್ಲೇ ಇದ್ದ ಕರಣ್ ಜೋಹರ್ ಗೂ ಕಿಸ್ ಕೊಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಕರಣ್ ಜೋಹರ್ ನಿರ್ದೇಶನದ, ರಣವೀರ್ ಸಿಂಗ್-ಆಲಿಯಾ ನಟನೆಯ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಈ ಸಿನಿಮಾ ಜುಲೈ​ 28ರಂದು ರಿಲೀಸ್ ಆಗಲಿದೆ.

More