ದೆಹಲಿ ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವಕ್ಕೆ ಸಿದ್ಧತೆ; ಪಥ ಸಂಚಲನ ನೋಡಲು ಕಾಯುತ್ತಿರುವ ದೇಶದ ಜನತೆ
ಗಣರಾಜ್ಯೋತ್ಸವ ಆಚರಣೆಗೆ ಇನ್ನು 5 ದಿನಗಳಷ್ಟೇ ಬಾಕಿ ಉಳಿದಿದೆ. ಈಗಾಗಲೇ ದೇಶಾದ್ಯಂತ ಸಂವಿಧಾನದ ಹಬ್ಬವನ್ನು ಆಚರಿಸಲು ಸಕಲ ತಯಾರಿ ನಡೆದಿದೆ. ಪ್ರತಿ ಬಾರಿಯಂತೆ ದೆಹಲಿಯ ಕರ್ತವ್ಯಪಥದಲ್ಲಿ ಕೂಡಾ ಈ ಬಾರಿ ಭರ್ಜರಿ ತಯಾರಿ ನಡೆದಿದೆ. ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್, ಸೇನೆ, ಪೊಲೀಸರು ಸೇರಿದಂತೆ ವಿವಿಧ ತುಕಡಿಗಳು ತಾಲೀಮು ಶುರು ಮಾಡಿದ್ದಾರೆ. ಇದರ ಜೊತೆಗೆ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೈಭವವನ್ನು ಸಾರಿ ಹೇಳುವ ಸ್ತಬ್ಧಚಿತ್ರಗಳು ಕೂಡಾ ಈ ಬಾರಿ ಮೆರವಣಿಗೆ ಹೊರಡಲಿವೆ. ವಾಯುಪಡೆಯ ವಿವಿಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಶೋ ಕೂಡಾ ಇರಲಿದೆ. ಜನವರಿ 26, ಭಾನುವಾರ ಕರ್ತವ್ಯಪಥದಲ್ಲಿ ನಡೆಯಲಿರುವ ಪೆರೇಡ್ ನೋಡಲು ವಿವಿಧ ಗಣ್ಯರು, ಜನ ಸಾಮಾನ್ಯರು ದೆಹಲಿಗೆ ಹೊರಡಲು ಸಿದ್ಧರಾಗಿದ್ದಾರೆ.