Dhruva Sarja: ಕೆರೆಬೇಟೆ ಸಿನಿಮಾ ನೋಡಿ ಖುಷಿಪಟ್ಟ ಪ್ರೇಕ್ಷಕ; ಗೌರಿಶಂಕರ್‌ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬೆಂಬಲ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dhruva Sarja: ಕೆರೆಬೇಟೆ ಸಿನಿಮಾ ನೋಡಿ ಖುಷಿಪಟ್ಟ ಪ್ರೇಕ್ಷಕ; ಗೌರಿಶಂಕರ್‌ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬೆಂಬಲ Video

Dhruva Sarja: ಕೆರೆಬೇಟೆ ಸಿನಿಮಾ ನೋಡಿ ಖುಷಿಪಟ್ಟ ಪ್ರೇಕ್ಷಕ; ಗೌರಿಶಂಕರ್‌ ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬೆಂಬಲ VIDEO

Mar 22, 2024 03:29 PM IST Manjunath B Kotagunasi
twitter
Mar 22, 2024 03:29 PM IST

  • ಕೆರೆಬೇಟೆ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರ ನೋಡಿದ ವೀಕ್ಷಕರು ಮಲೆನಾಡಿನ ಸೊಬಗಿಗೆ ಸೋತಿದ್ರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ನೋಡಿ ಕೆರೆಬೇಟೆ ತಂಡದ ಬೆನುತಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಲೆನಾಡ ಭಾಗದ ಕಥೆಯನ್ನ ಹೊಂದಿರುವ ಕೆರೆಬೇಟೆಯಲ್ಲಿ, ಯಾರ ಮಾತನ್ನೂ ಕೇಳದೆ ಯಾರಿಗೂ ಕ್ಯಾರೇ ಎನ್ನದ ಮನಸ್ಥಿತಿ ಕಥಾನಾಯಕನದ್ದು. ಒಂದು ರೀತಿ ಆತ ಇಡೀ ಊರಿಗೆ ಗುಂಡ್ರಗೋವಿ. ಹೆಸರು ಹುಲಿಮನೆ ನಾಗ (ಗೌರಿಶಂಕರ್‌). ಮೋಟು ಬೀಡಿ ಸೇದುತ್ತಾ, ಕುರುಚುಲು ಗಡ್ಡದ, ಕಪ್ಪು ತುಟಿಯುಳ್ಳ ಉಡಾಳ. ಇಂಥ ಹುಡುಗನ ಎದೆಗೆ ಕಾಲಿಟ್ಟವಳು, ಮೇಲ್ಜಾತಿಯ ಮೀನಾ(ಬಿಂದು). ಒಂದು ಸನ್ನಿವೇಶದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆಕೆಯೊಡೆಯುತ್ತದೆ, ಊರ ತುಂಬ ಸುದ್ದಿಯಾಗಿ, ಮನೆ ಮಂದಿಗೂ ವಿಚಾರ ತಿಳಿದು ರಾದ್ಧಾಂತವಾಗುತ್ತದೆ. ಅಲ್ಲಿಂದ ಶುರುವಾದ ಕಥೆ ಪ್ರೇಕ್ಷಕನ ಮನೆ ಗೆಲ್ಲುವಲ್ಲಿ ಸಕ್ಸಸ್ ಆಗಿದೆ.

More