‘ನಮ್ದೆಲ್ಲ ಒಂದೇ ಬ್ಯಾಚ್‌, ಈ ವಿಚಾರದಲ್ಲಿ ಧನ್ವೀರ್‌ ನನಗಿಂತ ಸೀನಿಯರ್’;‌ ಕೈವ ಜತೆ ರುದ್ರ ಅಭಿಯ ಮಾತುಕತೆ INTERVIEW
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ‘ನಮ್ದೆಲ್ಲ ಒಂದೇ ಬ್ಯಾಚ್‌, ಈ ವಿಚಾರದಲ್ಲಿ ಧನ್ವೀರ್‌ ನನಗಿಂತ ಸೀನಿಯರ್’;‌ ಕೈವ ಜತೆ ರುದ್ರ ಅಭಿಯ ಮಾತುಕತೆ Interview

‘ನಮ್ದೆಲ್ಲ ಒಂದೇ ಬ್ಯಾಚ್‌, ಈ ವಿಚಾರದಲ್ಲಿ ಧನ್ವೀರ್‌ ನನಗಿಂತ ಸೀನಿಯರ್’;‌ ಕೈವ ಜತೆ ರುದ್ರ ಅಭಿಯ ಮಾತುಕತೆ INTERVIEW

Published Dec 07, 2023 12:57 PM IST Manjunath B Kotagunasi
twitter
Published Dec 07, 2023 12:57 PM IST

  • ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ ಕೈವ ಡಿಸೆಂಬರ್ 8ರಂದು ಬಿಡುಗಡೆಯಾಗುತ್ತಿದೆ. ಖಡಕ್‌ ಕತ್ತಿಯಂತೆ ಫೈಟಿಂಗ್‌ ಮಾಡುವ ದೃಶ್ಯಗಳ ಜತೆಗೆ ಪ್ರೇಮಕಥೆಯ ಎಳೆಯೂ ಟೀಸರ್‌ನಲ್ಲಿ ಕಾಣಿಸುತ್ತಿದೆ. ಕೈವ ಇದು ಒಬ್ಬ ವ್ಯಕ್ತಿಯ ಹೆಸರು. 1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ಚಿತ್ರದ ನಾಯಕನಾಗಿ ಧನ್ವೀರ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಮೇಘಾ ಶೆಟ್ಟಿ ನಟಿಸಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ವೇತಪ್ರಿಯ ಛಾಯಾಗ್ರಹಣ ಮಾಡಿದ್ದಾರೆ. ಮೈಸೂರಿನಲ್ಲಿ ನಲವತ್ತೆಂಟು ದಿನಗಳ ಚಿತ್ರೀಕರಣ ನಡೆದಿದೆ. ಕೆಲವು ಭಾಗಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಬಗ್ಗೆ ವಿಶೇಷ ಸಂದರ್ಶನ ಇಲ್ಲಿದೆ.

More