ಆನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ ಅರ್ಜುನ ಆನೆಯ ಸಮಾಧಿ ಕಟ್ಟಿಸಲು ಕೈಜೋಡಿಸಿದ ದರ್ಶನ್ VIDEO
- ಹಾಸನ ಬಳಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದ ದಸರಾ ಆನೆ ಅರ್ಜುನನಿಗಾಗಿ ಇಡೀ ಕರುನಾಡು ಮಿಡಿದಿತ್ತು. ಆನೆ ಸಾವಿಗೆ ಸಾವಿರಾರು ಮಂದಿ ಕಣ್ಣೀರಿಟ್ಟಿದ್ದರು. ವನ್ಯಜೀವಿ ಪ್ರೇಮಿಯಾಗಿರುವ ನಟ ದರ್ಶನ್ ಕೂಡ ತೀರಾ ನೊಂದುಕೊಂಡಿದ್ದರು. ಅರ್ಜುನನ ಸಾವಿಗೆ ಕಂಬನಿ ಮಿಡಿದಿದ್ದ ದರ್ಶನ್, ಆನೆಯ ನೆನಪನ್ನ ಚಿರಸ್ಥಾಯಿಯಾಗಿಸುವ ಸಂಕಲ್ಪ ಮಾಡಿದ್ರು. ಈ ಆನೆಯ ಸವಿನೆನಪಿಗೆ ಸಮಾಧಿ ಕಟ್ಟಿಸುವ ಭರವಸೆ ಕೊಟ್ಟಿದ್ರು. ಅದರಂತೆ ಈಗ ದರ್ಶನ್, ಅರ್ಜುನನ ಸಮಾಧಿ ಕಟ್ಟಿಸಲು ಕಲ್ಲುಗಳನ್ನು ಮತ್ತು ಇತರೆ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇದು ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.