Kariya Re Release: ದರ್ಶನ್ ಅಭಿನಯದ ಕರಿಯ ರೀ ರಿಲೀಸ್; ಥಿಯೇಟರ್‌ನಲ್ಲಿ ಕುಣಿದು ಕುಪ್ಪಳಿಸಿದ ಫ್ಯಾನ್ಸ್ VIDEO
- Kariya Re Release: ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ರೂ ಫ್ಯಾನ್ಸ್ ಮಾತ್ರ ದಾಸನ ಸಿನಿಮಾಗಳನ್ನ ಸೆಲೆಬ್ರೆಟ್ ಮಾಡ್ತಿದ್ದಾರೆ. ಇದೀಗ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದಾಗಿದ್ದ ಕರಿಯ ಸಿನಿಮಾ ಮತ್ತೆ ತೆರೆಗೆ ಬಂದಿದ್ದು ಅಭಿಮಾನಿಗಳು ಭಾರೀ ಸಂಭ್ರಮಾಚರಣೆ ನಡೆಸಿದ್ದಾರೆ. 2003ರಲ್ಲಿ ತೆರೆಗೆ ಬಂದಿದ್ದ, ಪ್ರೇಮ್ ನಿರ್ದೇಶನದ ಈ ಸಿನಿಮಾ, ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ದಾಖಲೆ ಬರೆದಿತ್ತು. ಇದೀಗ ಅದೇ ಸಿನಿಮಾ ಬೆಂಗಳೂರಿನ ವಿವಿಧ ಥಿಯೇಟರ್‌ಗಳಲ್ಲಿ ಆಗಸ್ಟ್ 30ರಂದು ಮರು ಬಿಡುಗಡೆಯಾಗಿದೆ. ದೊಡ್ಡ ದೊಡ್ಡ ಕಟೌಟ್‌ಗಳನ್ನು ಹಾಕಿ ಫ್ಯಾನ್ಸ್ ಹಬ್ಬ ಮಾಡುತ್ತಿದ್ದಾರೆ.