ಕನ್ನಡ ಸುದ್ದಿ  /  Video Gallery  /  Sandalwood News Actress Amulya Jagdish Celebrates Twins Atharv And Adhavs Grand Birthday Mnk

ಅವಳಿ ಮಕ್ಕಳ ಅದ್ಧೂರಿ ಬರ್ತ್‌ಡೇ ಆಚರಿಸಿದ ಅಮೂಲ್ಯ; ಹೀಗಿದೆ ಅಥರ್ವ್‌ ಆಧವ್‌ ಆಟ ತುಂಟಾಟದ VIDEO

Mar 07, 2024 07:36 PM IST Manjunath B Kotagunasi
twitter
Mar 07, 2024 07:36 PM IST
  • ಮದುವೆಯ ಬಳಿಕ ಸಿನಿಮಾದಿಂದ ದೂರವೇ ಉಳಿದಿರುವ ನಟಿ ಅಮೂಲ್ಯ ಇದೀಗ ಇಬ್ಬರು ಮಕ್ಕಳ ಜತೆಗೆ ಒಳ್ಳೆಯ ಸಮಯವನ್ನು ಕಳೆಯುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರು ಅವಳಿ ಪುಟಾಣಿಗಳ ಹೊಸ ಹೊಸ ಫೋಟೋಶೂಟ್‌ ಹಂಚಿಕೊಂಡು, ಸಂಭ್ರಮಿಸುತ್ತಿರುತ್ತಾರೆ. ಇದೀಗ ಅಥರ್ವ್‌ ಮತ್ತು ಆಧವ್‌ ಮಕ್ಕಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಿದ್ದಾರೆ ಅಮೂಲ್ಯ ಜಗದೀಶ್.‌ ಮನೆಯಲ್ಲಿಯೇ ಆಯೋಜಿಸಿದ್ದ ಬರ್ತ್‌ಡೇ ಪಾರ್ಟಿಯಲ್ಲಿ ಎರಡೂ ಕುಟುಂಬಗಳ ಆಪ್ತರು, ಮತ್ತು ಸಿನಿಮಾದ ಕೆಲ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಕ್ಕೂ ಮೊದಲು ಅವಳಿ ಮಕ್ಕಳನ್ನು ಕರೆದುಕೊಂಡು, ಶಿರಡಿ ಸಾಯಿಬಾಬನ ದರ್ಶನವನ್ನೂ ಪಡೆದು ಬಂದಿದ್ದರು ಅಮೂಲ್ಯ ಮತ್ತು ಜಗದೀಶ್‌ ಚಂದ್ರ. ಅಂದಹಾಗೆ, 2017ರಲ್ಲಿ ಅಮೂಲ್ಯ ಮತ್ತು ಜಗದೀಶ್‌ ಚಂದ್ರ ಬಾಳಬಂಧನಕ್ಕೆ ಬಲಗಾಲಿಟ್ಟಿದ್ದರು. 2022ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು ಅಮೂಲ್ಯ. ಈ ನಡುವೆ ಶೀಘ್ರದಲ್ಲಿ ಸಿನಿಮಾಕ್ಕೂ ಬರುವುದಾಗಿ ಅಮೂಲ್ಯ ಹೇಳಿಕೊಂಡಿದ್ದಾರೆ. ಆದರೆ, ಯಾವ ಸಿನಿಮಾ ಎಂಬುದನ್ನು ಇನ್ನಷ್ಟೇ ಅಧಿಕೃತಗೊಳಿಸಬೇಕು.
More