ಬಾಳ ಬಂಧನಕ್ಕೆ ಬಲಗಾಲಿಟ್ಟ ಮುದ್ದಾದ ಜೋಡಿ; ಅದ್ಧೂರಿಯಾಗಿ ನೆರವೇರಿದ ತರುಣ್ ಸುಧೀರ್- ಸೋನಲ್ ವಿವಾಹ
- ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತೆರೋ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದೆ. ಇಂದು (ಆಗಸ್ಟ್ 11) ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ನಡೆದ ಅದ್ಧೂರಿ ಕಲ್ಯಾಣ ಮಹೋತ್ಸವದಲ್ಲಿ ಸೋನಲ್‌ಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಸಿನಿಮಾ ಆಪ್ತರು, ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಸತಿಪತಿಗಳಾಗಿದ್ದಾರೆ.