ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದುನಿಯಾ ವಿಜಯ್‌ ಸಿನಿಮಾದಲ್ಲಿ ಪುತ್ರಿ ರಿತನ್ಯ ನಟನೆ; ಅಪ್ಪನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ Video

ದುನಿಯಾ ವಿಜಯ್‌ ಸಿನಿಮಾದಲ್ಲಿ ಪುತ್ರಿ ರಿತನ್ಯ ನಟನೆ; ಅಪ್ಪನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ VIDEO

Apr 12, 2024 09:14 PM IST Manjunath B Kotagunasi
twitter
Apr 12, 2024 09:14 PM IST
  • Duniya Vijay: ನಟ ದರ್ಶನ್ ನಾಯಕರಾಗಿ ನಟಿಸಿದ್ದ ಸಾರಥಿ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್‌ ಆಗಿತ್ತು. ಆ ಸಿನಿಮಾ ನಿರ್ಮಾಣ ಮಾಡಿದ್ದು, ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್. ಈಗ ಹನ್ನೆರಡು ವರ್ಷಗಳ ಬಳಿಕ ಸಾರಥಿ ಫಿಲಂಸ್ ಹೆಸರಿನ ನಿರ್ಮಾಣ ಸಂಸ್ಥೆ ಜತೆಗೆ ಹೊಸ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ನಿರ್ಮಾಣಕ್ಕೆ ಸತ್ಯಪ್ರಕಾಶ್ ಅವರ ಪುತ್ರ ಸೂರಜ್ ಗೌಡ ಅವರು ಸಹ ಸಾಥ್ ನೀಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಜಂಟಲ್‌ಮ್ಯಾನ್‌, ಗುರುಶಿಷ್ಯರು ಸಿನಿಮಾ ಮತ್ತು ಕಾಟೇರ ಕಥೆಯ ಮೂಲಕವೇ ಗಮನ ಸೆಳೆದ ನಿರ್ದೇಶಕ ಜಡೇಶ್‌ ಕುಮಾರ್‌ ಹಂಪಿ ಈಗ ದುನಿಯಾ ವಿಜಯ್‌ ಕುಮಾರ್‌ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವಿಜಯ್ ಕುಮಾರ್‌ ನಾಯಕರಾಗಿ ನಟಿಸುತ್ತಿರುವ 29ನೇ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೇ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತು. ಶಾಸಕ ಶ್ರೀ ಗೋಪಾಲಯ್ಯ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು. ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ (ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಈ ಮೂಲಕ ಹೊಸ ಹೆಸರಿನ ಜತೆಗೆ ಅವರ ಆಗಮನವಾಗಲಿದೆ. "ಡೇರ್ ಡೆವಿಲ್ ಮುಸ್ತಫಾ" ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
More