ಮದುವೆ ಹೊಸ್ತಿಲಲ್ಲಿ ಪ್ರೀತಿ ಹುಟ್ಟಿದ ಕಥೆ ಹೇಳಿದ ತರುಣ್ ಸುಧೀರ್ -ಸೋನಾಲ್ ಮೊಂತೇರೊ VIDEO
- ಆಗಸ್ಟ್ 10ರಂದು ಆರತಕ್ಷತೆ ನಡೆದರೆ, 11ರ ಭಾನುವಾರ ಬೆಳಗ್ಗೆ 10;50 ರಿಂದ 11;35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿಯಲಿದೆ. ಈಗಾಗಲೇ ಮದುವೆ ಹಿನ್ನೆಲೆಯಲ್ಲಿ ಸಕಲ ಸಿದ್ದತೆಗಳು ಶುರುವಾಗಿವೆ. ಪರಿಸರ ಸ್ನೇಹಿ ಲಗ್ನ ಪತ್ರಿಕೆ ಮೂಲಕವೂ ಗಮನ ಸೆಳೆದಿದೆ ಈ ಜೋಡಿ. ಅದರಂತೆ ಬೆಂಗಳೂರಿನ ಮೈಸೂರು ರಸ್ತೆ, ಆರ್‌ವಿ ಕಾಲೇಜ್ ಬಳಿಯ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಈ ಜೋಡಿಯ ಅದ್ಧೂರಿ ವಿವಾಹ ನೆರವೇರಲಿದೆ. ತಮ್ಮ ಮದುವೆ ಕಾರ್ಯಕ್ರಮದ ಬಗ್ಗೆ ಈ ಜೋಡಿ ಮಾಹಿತಿ ನೀಡಿದೆ.