ಕಿನ್ನಿಗೋಳಿ ದೈವಾರಾಧನೆಯಲ್ಲಿ ಕೆಜಿಎಫ್ ಶ್ರೀನಿಧಿ ಶೆಟ್ಟಿ; ನೇಮೋತ್ಸವದಲ್ಲಿ ಸಿಕ್ತು ದೈವದ ಅಭಯ VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಿನ್ನಿಗೋಳಿ ದೈವಾರಾಧನೆಯಲ್ಲಿ ಕೆಜಿಎಫ್ ಶ್ರೀನಿಧಿ ಶೆಟ್ಟಿ; ನೇಮೋತ್ಸವದಲ್ಲಿ ಸಿಕ್ತು ದೈವದ ಅಭಯ Video

ಕಿನ್ನಿಗೋಳಿ ದೈವಾರಾಧನೆಯಲ್ಲಿ ಕೆಜಿಎಫ್ ಶ್ರೀನಿಧಿ ಶೆಟ್ಟಿ; ನೇಮೋತ್ಸವದಲ್ಲಿ ಸಿಕ್ತು ದೈವದ ಅಭಯ VIDEO

Published May 09, 2024 04:59 PM IST Manjunath B Kotagunasi
twitter
Published May 09, 2024 04:59 PM IST

  • ರಾಕಿಂಗ್ ಸ್ಟಾರ್ ಯಶ್ ಜೊತೆ ಕೆಜಿಎಫ್ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ಶ್ರೀನಿಧಿ ಶೆಟ್ಟಿ, ಮಂಗಳೂರಿನ ಹೊರವಲಯದ ಕಿನ್ನಿಗೋಳಿಯಲ್ಲಿ ತಮ್ಮ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ಹರಕೆಯ ನೇಮದಲ್ಲಿ ಪಾಲ್ಗೊಂಡರು. ಶ್ರೀನಿಧಿ ಶೆಟ್ಟಿಯವರು ಈ ಹಿಂದೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ತಮ್ಮ ಕುಟುಂಬದ ದೈವ ಜಾರಂದಾಯ ಮತ್ತು ಬಂಟ ಹಾಗೂ ಪರಿವಾರ ದೈವಗಳಿಗೆ ನೇಮ ನೀಡುತ್ತೇನೆಂದು ಹರಕೆ ಹೇಳಿಕೊಂಡಿದ್ದರು. ಇದೀಗ ಅವರು ಕುಟುಂಬದ ಮನೆ ತಾಳಿಪಾಡಿಗುತ್ತುವಿಗೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ನೇಮದಲ್ಲಿ ಪಾಲ್ಗೊಂಡರು. ತಮ್ಮ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದವಿದ್ದು, ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಸಲ್ಲಿಸಿದ್ದಾರೆ. ನೇಮದ ವೇಳೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿ ಎಂದು ದೈವಗಳು ಶ್ರೀನಿಧಿ‌ ಶೆಟ್ಟಿಗೆ ಅಭಯ ನೀಡಿದೆ.

More