ಕನ್ನಡ ಸುದ್ದಿ  /  Video Gallery  /  Sandalwood News Pavitra Gowda Got Darshan's Year Of Birth Tattooed On Her Hand Check Video Mnk

ಕೈಮೇಲೆ ‘777’ ಟ್ಯಾಟೂ ಹಾಕಿಸಿದ ಪವಿತ್ರಾ ಗೌಡ; ಹಚ್ಚೆಯ ಒಳಾರ್ಥಕ್ಕೂ, ದರ್ಶನ್‌ಗೂ ಇದೆ ಇಂಥದ್ದೊಂದು ನಂಟು! VIDEO

Mar 13, 2024 02:17 PM IST Manjunath B Kotagunasi
twitter
Mar 13, 2024 02:17 PM IST
  • ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಮತ್ತು ಪವಿತ್ರಾ ಗೌಡ ಅವರ ಪ್ರಹಸನ ಮುಗಿದು ತುಂಬ ದಿನಗಳಾದವು. ಈಗ ಮತ್ತೆ ಇದೇ ಪವಿತ್ರಾ ಗೌಡ ಪರೋಕ್ಷವಾಗಿ ದರ್ಶನ್‌ ಅವರನ್ನು ನೆನಪಿಸಿಕೊಂಡಿದ್ದಾರೆ. ಅದೂ ಶಾಶ್ವತವಾಗಿ! ಅಂದರೆ, ಕೈ ಮೇಲೆ 777 ಎಂಬ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ದರ್ಶನ್‌ ಅವರನ್ನು ಕೈ ಮೇಲೆ ಮೂಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ 777 ಸಂಖ್ಯೆಗೂ ದರ್ಶನ್‌ಗೂ ಎಲ್ಲಿಂದ ಎಲ್ಲಿಯ ಸಂಬಂಧ? ಹೀಗೆ ಪ್ರಶ್ನೆ ಮೂಡಿದರೆ, ಇದಕ್ಕೆ ಉತ್ತರವೂ ಸಿಕ್ಕಿದೆ. ನಟ ದರ್ಶನ್‌ ಅವರ ಜನ್ಮ ಇಸವಿ 1977. ಇತ್ತ ಪವಿತ್ರಾ ಗೌಡ ಅವರ ಮಗಳ ಬರ್ತ್‌ಡೇ ದಿನ 7. ಈ ಎರಡನ್ನೂ ಸೇರಿಸಿಕೊಂಡು, ತಮ್ಮ ಬಲಗೈ ಮುಂಭಾಗದ ಮಣಿಕಟ್ಟಿನಲ್ಲಿ 777 ಎಂದು ಬರೆದುಕೊಂಡಿದ್ದಾರೆ. ವಿಶೇಷ ಏನೆಂದರೆ, ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ನೀತು ವನಜಾಕ್ಷಿ ಪವಿತ್ರಾ ಗೌಡ ಅವರಿಗೆ ಟ್ಯಾಟೂ ಡಿಸೈನ್‌ ಮಾಡಿದ್ದಾರೆ.
More