Pepe Movie: ಪೆಪೆ ಟ್ರೇಲರ್ ನೋಡಿ ದೊಡ್ಮನೆಯ ಮುಂದೆ ಜಮಾಯಿಸಿದ ಜನ; ಅಭಿಮಾನಿಗಳ ಪ್ರೀತಿ ನೋಡಲೆರಡು ಕಣ್ಣು ಸಾಲದು
- Vinay Rajkumar Pepe Kannada Movie Updates: ವಿನಯ್ ರಾಜ್ ಕುಮಾರ್ ಅಭಿನಯದ ಪೆಪೆ ಟ್ರೇಲರ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಲವರ್ ಬಾಯ್ ಆಗಿ ಮಿಂಚಿದ್ದ ವಿನಯ್ ರಾಜಕುಮಾರ್ ಇದೀಗ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪೆಪೆ ಸಿನಿಮಾದ ಟ್ರೈಲರ್ ಕಥೆಯ ಗಟ್ಟಿತನವನ್ನ ಸಾರಿದ್ದು, ಆಗಸ್ಟ್ 30ರಂದು ಸಿನಿಮಾ ಬಿಡುಗಡೆಯಾಗಲಿದೆ. ಇನ್ನು ಟ್ರೇಲರ್ ಬಿಡುಗಡೆ ಹಿನ್ನೆಲೆಯಲ್ಲಿ ವಿನಯ್ ಮನೆ ಮುಂದೆ ಜಾಮಾಯಿಸಿದ ಫ್ಯಾನ್ಸ್ ವಿಶ್ ಮಾಡಿದ್ದಾರೆ. ವಿನಯ್ ಜೊತೆ ಸಹೋದರ ಯುವ ರಾಜ್ ಕುಮಾರ್ ಕೂಡ ಫೋಟೋಗೆ ಪೋಸ್ ನೀಡಿದ್ದಾರೆ. ಪೆಪೆ ಸಿನಿಮಾ ಇದೇ ಆಗಸ್ಟ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.