ಮುದ್ದಾದ 6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ; ಪಪ್ಪಿಗಳನ್ನು ನೋಡಿ ರಕ್ಷಿತ್ ಶೆಟ್ಟಿ ಸಂಭ್ರಮ VIDEO
- ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ದೇಶಾದ್ಯಂತ ಸದ್ದು ಮಾಡಿತ್ತು. ನಾಯಿಯೊಂದಿಗಿನ ಮನುಷ್ಯ ಸಂಬಂಧವನ್ನ ಭಾವನಾತ್ಮಕವಾಗಿ ಹೆಣೆದಿದ್ದ ಈ ಸಿನಿಮಾದಲ್ಲಿ ಚಾರ್ಲಿ ಭಾರೀ ಗಮನ ಸೆಳೆದಿತ್ತು. 2022ರ ಜೂನ್ 10ರಂದು ರಕ್ಷಿತ್ ಶೆಟ್ಟಿಯ 777 ಚಾರ್ಲಿ ಸಿನಿಮಾ ತೆರೆಕಂಡಿತ್ತು. ಕನ್ನಡದ ಜತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಚಿತ್ರ ಮೂಡಿಬಂದಿತ್ತು. ಈಗ ಅದೇ ಚಾರ್ಲಿ ಹೆಸರಿನ ನಾಯಿಯಿಂದ ಸಿಹಿ ಸುದ್ದಿ ಬಂದಿದೆ. ಚಾರ್ಲಿ ಮುದ್ದಾದ 6 ಮರಿಗಳಿಗೆ ಚಾರ್ಲಿ ಜನ್ಮ ನೀಡಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ, ಮೈಸೂರಿಗೆ ಓಡೋಡಿ ಹೋದ ರಕ್ಷಿತ್, ಚಾರ್ಲಿ ಹಾಗೂ ಮರಿಗಳನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.