ಕಲ್ಟ್ ಕ್ಲಾಸಿಕ್ A ಚಿತ್ರ ಮರು ಬಿಡುಗಡೆ; ಥಿಯೇಟರ್ ಬಳಿ ಉಪ್ಪಿ ಫ್ಯಾನ್ಸ್ ಜಾತ್ರೆ, ಪಟಾಕಿ ಸಿಡಿಸಿ ಸಂಭ್ರಮ VIDEO
- ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಕೆರಿಯರ್‌ನಲ್ಲಿ A ಚಿತ್ರಕ್ಕೆ ಅದರದೇ ಆದ ತೂಕವಿದೆ. ಇದೀಗ ದಶಕಗಳ ಹಿಂದೆ ತೆರೆಗೆ ಬಂದಿದ್ದ ಅದೇ ಸಿನಿಮಾ ಮರು ಬಿಡುಗಡೆ ಆಗಿದೆ. ಟಿಪಿಕಲ್ ಉಪ್ಪಿ ಸಿನಿಮಾ ನೋಡದೇ ತುಂಬ ದಿನಗಳಿಂದ ಕಾದಿದ್ದ ಅಭಿಮಾನಿಗಳಿಗೆ A ಚಿತ್ರ ಬಾಡೂಟವನ್ನೇ ಬಡಿಸಿದೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ A ಸಿನಿಮಾ ಬಿಡುಗಡೆ ಆಗಿದೆ. ಹಾಗೇ ಬಿಡುಗಡೆ ಆಗಿದ್ದೇ ತಡ, ಹೊಸ ಸಿನಿಮಾ ರಿಲೀಸ್ ಆಗಿದೆಯೇನೋ ಅನ್ನೂ ಭಾವ ಚಿತ್ರಮಂದಿರಗಳ ಮುಂದೆ ಆವರಿಸಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಗಿನ 6 ಗಂಟೆಯ ಶೋಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. A ಚಿತ್ರದ ಹಾಡುಗಳಿಗೆ ಸ್ಟೆಪ್ಸ್ ಹಾಕುತ್ತಿದ್ದಾರೆ ಸಿನಿಮಾ ಪ್ರೇಮಿಗಳು. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವುದು ಒಂದೆಡೆಯಾದರೆ, 25 ವರ್ಷಗಳ ಹಿಂದಿನ ಸಿನಿಮಾವನ್ನು ತೆರೆಮೇಲೆ ಕಣ್ತುಂಬಿಕೊಳ್ಳುವ ಮತ್ತೊಂದು ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದೆ. ಬಿಡುಗಡೆಯಾದ ಕೆಲವು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನವನ್ನೂ ಕಾಣುತ್ತಿದೆ.