ನಟ ಯಶ್ ಇಷ್ಟ ಆಗೋದೇ ಈ ಕಾರಣಕ್ಕೆ; ಸೆಟ್ ಬಾಯ್ ಕೈನಲ್ಲಿ ಮೂವಿ ಕ್ಲ್ಯಾಪ್ ಮಾಡಿಸಿದ ರಾಕಿಂಗ್ ಸ್ಟಾರ್
- ಕೆಜಿಎಫ್ ನಂತ್ರ ಯಶ್ ಯಾವ ಸಿನಿಮಾ ಮಾಡ್ತಾರೆ, ಯಾವಾಗ ಮಾಡ್ತಾರೆ ಅಂತ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ರು. ಕಳೆದ ವರ್ಷ ಟಾಕ್ಸಿಕ್ ಸಿನಿಮಾ ಘೋಷಣೆ ಮಾಡಿದ್ದರು. ಇದೀಗ ಈ ಚಿತ್ರದ ಶೂಟಿಂಗ್‌ಗೆ ಚಾಲನೆ ಸಿಕ್ಕಿದೆ. ಚಿತ್ರೀಕರಣ ಆರಂಭಕ್ಕೂ ಮೊದಲು ದೇವಾಲಯಗಳಿಗೆ ತೆರಳಿ ದರ್ಶನ ಮಾಡಿದ್ದ ರಾಕಿಭಾಯ್, ವಿಶೇಷ ಪ್ರಾರ್ಥನೆ ಸಲ್ಲಿಸಿ ಮರಳಿದ್ದರು. ಇದೀಗ ಬೆಂಗಳೂರಿನ ಎಚ್‌ಎಂಟಿಯಲಿ ಅದ್ದೂರಿ ಸೆಟ್‌ನಲ್ಲಿ ಸೆಟ್ ಬಾಯ್ ಸುನೀಲ್ ಅವರ ಕೈನಲ್ಲೇ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿಸಿ ಗಮನ ಸೆಳೆದಿದ್ದಾರೆ ಯಶ್.