ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಚಿತ್ರದ ಫಸ್ಟ್‌ಲುಕ್ ವೀಕ್ಷಿಸಿ, ಹರಸಿದ ದೈವ ಕೊರಗಜ್ಜ VIDEO
- ಸುಧೀರ್ ಅತ್ತಾವರ್ ನಿರ್ದೇಶನದ ಕೊರಗಜ್ಜ ಸಿನಿಮಾ ಬಹುತೇಕ ಶೂಟಿಂಗ್ ಮುಗಿಸಿಕೊಂಡಿದೆ. ಈ ನಡುವೆ ಇದೇ ಚಿತ್ರದ ಮೋಷನ್ ಪೋಸ್ಟರ್ ಸಹ ಸಿದ್ಧವಾಗಿದ್ದು, ಅದರ ಮೊದಲ ಪ್ರತಿಯನ್ನು ದೈವಕ್ಕೆ ಅರ್ಪಿಸಿ, ದೈವದ ಒಪ್ಪಿಗೆ ಪಡೆದುಕೊಂಡಿದೆ ಚಿತ್ರತಂಡ. ದೈವದ ಕಳೆ ಕಾರ್ಣಿಕ ಮತ್ತು ಪಾವಿತ್ರ್ಯತೆಗೆ ಯಾವುದೇ ಧಕ್ಕೆ ಬಾರದಂತೆ, ಕೊರಗಜ್ಜ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ನಿರ್ದೇಶಕ ಸುಧೀರ್ ಅತ್ತಾವರ್ ಕೋಲಸೇವೆ ನೀಡಿದರು. ಇದೇ ವೇಳೆ ಪ್ರದರ್ಶನಕ್ಕೆ ದೈವದಿಂದಲೂ ಒಪ್ಪಿಗೆ ಸಿಕ್ಕಿದೆ. ಇನ್ನೇನು ಶೀಘ್ರದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಲಿದೆ.