ಭೀಮ ಸಿನಿಮಾ ನೋಡಲು ಪೆಪೆ ತಂಡದೊಂದಿಗೆ ಬಂದು ಖುದ್ದು ಟಿಕೆಟ್ ಖರೀದಿಸಿದ ವಿನಯ್ ರಾಜ್‌ಕುಮಾರ್ VIDEO
- ರಾಜ್ಯದೆಲ್ಲೆಡೆ ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾ ಭರ್ಜರಿ ಶೋ ಕಾಣುತ್ತಿದೆ. ಡ್ರಗ್ ವಿರುದ್ದ ಹೋರಾಟದ ಮೆಸೆಜ್ ಇರುವ ಈ ಸಿನಿಮಾವನ್ನು ಬಹುತೇಕ ಎಲ್ಲರೂ ಮೆಚ್ಚಿಕೊಂಡಿದ್ದು, ವಿಜಯ್ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ. ಇನ್ನು ವಿನಯ್ ರಾಜ್‌ಕುಮಾರ್ ಹಾಗೂ ಪೆಪೆ ತಂಡ ಭೀಮ ಸಿನಿಮಾ ನೋಡಲು ವೀರೇಶ್ ಥಿಯೇಟರ್‌ಗೆ ಆಗಮಿಸಿತ್ತು. ಈ ವೇಳೆ ಖುದ್ದು ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿದ ಪೆಪೆ ಸಿನಿಮಾ ತಂಡ, ಭೀಮ ಸಿನಿಮಾ ನೋಡಿ ಎಂಜಾಯ್ ಮಾಡಿದೆ.