ದುನಿಯಾ ವಿಜಯ್ ನಟನೆಯ ಭೀಮ ಚಿತ್ರದ ಟ್ರೇಲರ್ ನೋಡಿ
- ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಭೀಮ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಸಿನಿಮಾ ಘೋಷಣೆ ಆದಾಗಿನಿಂದ ಸುದ್ದಿಯಲ್ಲಿರುವ ಈ ಸಿನಿಮಾ, ಅದಾದ ಬಳಿಕ ಹಾಡು, ಟೀಸರ್‌ಗಳ ಮೂಲಕವೇ ನೋಡುಗರ ಕಣ್ಣರಳಿಸುವಂತೆ ಮಾಡಿತ್ತು. ಇದೀಗ ಆ ಕೌತುಕಕ್ಕೆ ಟ್ರೇಲರ್ ಮೂಲಕ ಒಗ್ಗರಣೆ ಹಾಕಿದೆ ಭೀಮ ಸಿನಿಮಾ. ಮಾಸ್ ಅವತಾರದಲ್ಲಿ ಎದುರಾದ ವಿಜಯ್, ಭೀಮನಾಗಿ ಅಬ್ಬರಿಸಿದ್ದಾರೆ. ಈ ಚಿತ್ರ ಆಗಸ್ಟ್ 9ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.