ಮಗಳು, ಪತಿ ಭುವನ್ ಪೊನ್ನಣ್ಣ ಜೊತೆ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ
ಸದ್ಯ ನಟನೆಯಿಂದ ದೂರ ಉಳಿದು ತಾಯ್ತನ ಎಂಜಾಯ್ ಮಾಡುತ್ತಿರುವ ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ, ಪತಿ ಭುವನ್ ಪೊನ್ನಣ್ಣ ಹಾಗೂ ಮಗುವಿನೊಂದಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ಮಗು ಜನಿಸಿದ ನಂತರ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹರಸಿಕೊಂಡಿದ್ದ ನಟಿ ಹರ್ಷಿಕಾ, ಮಗಳು ಜನಿಸಿದ ನಂತರ ಕುಟುಂಬದ ಜೊತೆ ಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 24 ಆಗಸ್ಟ್ 2023 ರಂದು ಹರ್ಷಿಕಾ ಹಾಗೂ ಭುವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, 2 ಜುಲೈ 2024 ರಂದು ಕೊಡವ ಸಂಪ್ರದಾಯಂತೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದ ಭುವನ್ ಹಾಗೂ ಹರ್ಷಿಕಾ ತಾವು ಅಪ್ಪ-ಅಮ್ಮ ಆಗುತ್ತಿರುವ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು. ಕಳೆದ ವರ್ಷ ನವರಾತ್ರಿ ಮೊದಲ ದಿನದಂದು ಹರ್ಷಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.