ದರ್ಶನ್‌ ತೂಗುದೀಪ್‌ಗೆ ಮಧ್ಯಂತರ ಜಾಮೀನು; ರಾಜರಾಜೇಶ್ವರಿ ನಗರ ನಿವಾಸದ ಮುಂದೆ ಜಮಾಯಿಸಿದ ದಾಸನ ಸೆಲೆಬ್ರಿಟಿಗಳು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದರ್ಶನ್‌ ತೂಗುದೀಪ್‌ಗೆ ಮಧ್ಯಂತರ ಜಾಮೀನು; ರಾಜರಾಜೇಶ್ವರಿ ನಗರ ನಿವಾಸದ ಮುಂದೆ ಜಮಾಯಿಸಿದ ದಾಸನ ಸೆಲೆಬ್ರಿಟಿಗಳು

ದರ್ಶನ್‌ ತೂಗುದೀಪ್‌ಗೆ ಮಧ್ಯಂತರ ಜಾಮೀನು; ರಾಜರಾಜೇಶ್ವರಿ ನಗರ ನಿವಾಸದ ಮುಂದೆ ಜಮಾಯಿಸಿದ ದಾಸನ ಸೆಲೆಬ್ರಿಟಿಗಳು

Oct 30, 2024 08:04 PM IST Rakshitha Sowmya
twitter
Oct 30, 2024 08:04 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ತೂಗುದೀಪ್‌ಗೆ ಮಧ್ಯಂತರ ಜಾಮೀನು ದೊರೆತಿದೆ. ದರ್ಶನ್‌ಗೆ ಅನಾರೋಗ್ಯ ಹೆಚ್ಚಾದ ಹಿನ್ನೆಲೆ ಶಸ್ತ್ರಚಿಕಿತ್ಸೆಗೆ ಒಳಗಾಗಲು 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ದರ್ಶನ್‌ಗೆ ಜಾಮೀನು ದೊರೆತ ವಿಚಾರ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ರಾಜರಾಜೇಶ್ವರಿ ನಗರ ನಿವಾಸದ ಮುಂದೆ ಫ್ಯಾನ್ಸ್‌ ಜಮಾಯಿಸಿದ್ದಾರೆ. ಒಮ್ಮೆ ಮೆಚ್ಚಿನ ನಟನನ್ನು ಕಣ್ತುಂಬಿಕೊಂಡರೆ ಸಾಕು ಎಂದು ಕಾಯುತ್ತಿದ್ದಾರೆ. 131 ದಿನಗಳಿಂದ ಜೈಲಿನಲ್ಲಿದ್ದ ದರ್ಶನ್‌ ಇಂದು ಸಂಜೆ ಹೊರಬಂದಿದ್ದಾರೆ. ಬಿಗಿಭದ್ರತೆಯಲ್ಲಿ ಅನಂತಪುರ ಮಾರ್ಗವಾಗಿ ಬೆಂಗಳೂರಿಗೆ ಆಗಮಿಲಿದ್ದಾರೆ. ದೀಪಾವಳಿ ಹಬ್ಬದ ಸಮಯಕ್ಕೆ ದರ್ಶನ್‌ಗೆ ಜಾಮೀನು ದೊರೆತು ಹೊರ ಬರುತ್ತಿರುವುದು ಅಭಿಮಾನಿಗಳಿಗೆ ಡಬಲ್‌ ಖುಷಿ ನೀಡಿದೆ.

More