ಯಕ್ಷಗಾನದಲ್ಲೂ ಸೈ ಎನಿಸಿಕೊಂಡ ಪುಟ್ಮಲ್ಲಿ; ಮಂಥರೆ ಪಾತ್ರದಲ್ಲಿ ಗಮನ ಸೆಳೆದ ಹಿರಿಯ ನಟಿ ಉಮಾಶ್ರೀ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಯಕ್ಷಗಾನದಲ್ಲೂ ಸೈ ಎನಿಸಿಕೊಂಡ ಪುಟ್ಮಲ್ಲಿ; ಮಂಥರೆ ಪಾತ್ರದಲ್ಲಿ ಗಮನ ಸೆಳೆದ ಹಿರಿಯ ನಟಿ ಉಮಾಶ್ರೀ

ಯಕ್ಷಗಾನದಲ್ಲೂ ಸೈ ಎನಿಸಿಕೊಂಡ ಪುಟ್ಮಲ್ಲಿ; ಮಂಥರೆ ಪಾತ್ರದಲ್ಲಿ ಗಮನ ಸೆಳೆದ ಹಿರಿಯ ನಟಿ ಉಮಾಶ್ರೀ

Published Jan 21, 2025 12:32 PM IST Rakshitha Sowmya
twitter
Published Jan 21, 2025 12:32 PM IST

ಹಿರಿಯ ನಟಿ ಉಮಾಶ್ರೀ ಅದ್ಭುತ ಕಲಾವಿದೆ ಅನ್ನೋದು ಕನ್ನಡ ಸಿನಿಪ್ರಿಯರಿಗೆ ಗೊತ್ತು, ಯಾವುದೇ ಪಾತ್ರವಾಗಲೀ ಲೀಲಾಜಾಲವಾಗಿ ಅಭಿನಯಿಸುವ ಉಮಾಶ್ರೀ ಇದೀಗ ಯಕ್ಷಗಾನದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಉತ್ತರ ಕನ್ನಡ ಹೊನ್ನಾವರದ ಪೆರ್ಡೂರು ಮೇಳದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ರಾಮ ಪಟ್ಟಾಭಿಷೇಕ, ಮಾಯಾಮೃಗಾವತಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಉಮಾಶ್ರೀ ಮಂಥರೆಯ ಪಾತ್ರದಲ್ಲಿ ನಟಿಸಿದ್ದಾರೆ. ಯಕ್ಷ ದಾಖಲೆ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ಉಮಾಶ್ರೀಯವರ ಅಭಿನಯದ ವಿಡಿಯೊವನ್ನು ಅನೇಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಮಾಶ್ರೀ ಅವರು ಈ ಪಾತ್ರ ಮಾಡಬೇಕು ಎನ್ನುವುದು ಯಕ್ಷ ಬ್ರಹ್ಮ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಆಸೆಯಾಗಿತ್ತಂತೆ. ಅದನ್ನು ಮಗ ಸುಬ್ರಮಣ್ಯ ಚಿಟ್ಟಾಣಿ ಅವರ ಬಳಿ ಹೇಳಿಕೊಂಡಿದ್ದರು, ತಮಗೆ ಯಕ್ಷಗಾನ ತಿಳಿದಿಲ್ಲದ ಕಾರಣ, ಮೊದಲು ಉಮಾಶ್ರೀ ಇದಕ್ಕೆ ನಿರಾಕರಿಸಿದ್ದರು. ಆದರೆ ಚಿಟ್ಟಾಣಿ ಅವರ ಮನವಿಗೆ ಸ್ಪಂದಿಸಿದ ಉಮಾಶ್ರೀ, ಅದನ್ನು ಸವಾಲಾಗಿ ತೆಗೆದುಕೊಂಡು ಮಂಥರೆ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

More