ಸಿದ್ದರಾಮಯ್ಯನವರು ಬಿಜೆಪಿಗೆ ಹೋಗ್ತಾರೆ ಎಂದು ಹರಡಿರುವ ವದಂತಿ ಬಗ್ಗೆ ಕೇಳಿದಕ್ಕೆ ಸಿಎಂ ಸಿದ್ದರಾಮಯ್ಯ ನಕ್ಕು ಬಿಟ್ಟಿದ್ದಾರೆ. ನಾನು ಜೀವನ ಪರ್ಯಂತ ಕೋಮುವಾದದ ವಿರುದ್ಧಹೋರಾಡಿ, ಸೆಕ್ಯಲರಿಸಂ ಬಗ್ಗೆ ವಾದ ಮಾಡುವವನು.. ಇದನ್ನ ಊಹಿಸಿಕೊಳ್ಳೋದಿಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ನನ್ನ ರಾಜಕೀಯ ಜೀವನದಲ್ಲಿ ಅಧಿಕಾರ ಇರಲಿ ಇಲ್ಲದಿರಲಿ, ನನ್ನ ಹೆಣನೂ ಬಿಜೆಪಿ ಹೋಗೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.